ತುಮಕೂರು : ಮಾಜಿ ಸಚಿವ ಟಿ.ಬಿ ಜಯಚಂದ್ರ ಅವರು ತನ್ನ ಸ್ವಂತ ಖರ್ಚಿನಲ್ಲಿ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಕೊರೊನಾ ರೋಗಿಗಳ ಅನುಕೂಲಕ್ಕಾಗಿ ಉಚಿತವಾಗಿ ಎರಡು ಆ್ಯಂಬುಲೆನ್ಸ್‌ಗಳನ್ನು ನೀಡಿದ್ದಾರೆ.
ಆ್ಯಂಬುಲೆನ್ಸ್ ನೀಡಿದರ ಜೊತೆಗೆ ಆಕ್ಸಿಜನ್ ಉಪಯೋಗಕ್ಕಾಗಿ 50 ಸಾವಿರ ಚೆಕ್‌ನ್ನು ಕೂಡ ಕೊರೊನಾ ವಾರಿಯರ್ಸ್‌ನ ತಂಡಕ್ಕೆ ನೀಡಿದರು.
20 ಕ್ಕೂ ಹೆಚ್ಚು ಜನರ ವಾರಿಯರ್ಸ್ ತಂಡವನ್ನು ರಚಿಸಿರುವ ಮಾಜಿ ಸಚಿವ ಟಿ ಬಿ ಜಯಚಂದ್ರ ಹಾಗೂ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ನಟರಾಜ್ ಬರಗೂರು ಅವರ ತಂಡ ಅಲ್ಲಿನ ಜನರ ಸೇವೆಗೆ ಟೊಂಕಕಟ್ಟಿ ನಿಂತಿದ್ದಾರೆ. ಜೊತೆಗೆ ಹಸಿದ ಮಂದಿಗೆ ಊಟದ ವ್ಯವಸ್ಥೆಯನ್ನೂ ಕೂಡ ಮಾಡಿದ್ದಾರೆ.