ಮದುವೆ ಸಮಾರಂಭದಲ್ಲಿ ಮಾಜಿ ಯೋಧರೊಬ್ಬರು ಬಂದೂಕಿನಿಂದ ಗಾಳಿಯಲ್ಲಿ ಗುಂಡಿನ ಸುರಿಮಳೆಗೈದಿದ್ದಾರೆ. ಗುಂಡು ಹಾರಿಸಿರುವ ಮಾಜಿ ಯೋಧನ ವಿಡಿಯೋ ವೈರಲ್ ಆಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಘಟನೆ ನಡೆದಿದೆ.
ರಫಿಕ್ ಅಹಮ್ಮದ ತಹಶೀಲ್ದಾರ ಎಂಬ ಮಾಜಿ ಯೋಧನಿಂದ ಗುಂಡಿನ ಸುರಿಮಳೆ ಕೃತ್ಯ ನಡೆದಿದೆ. ತನ್ನ 9.62 mmನ ಲೈಸೆನ್ಸ್ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಮದುವೆ ಸಮಾರಂಭದ ಖುಷಿಯಲ್ಲಿ 5 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ. ಮಾಜಿ ಸೈನಿಕನ ಹುಚ್ಚಾಟದಿಂದ ಮದುವೆಗೆ ಆಗಮಿಸಿದ್ದ ಸಂಬಂಧಿಗಳು ದಂಗಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಜಿ ಸೈನಿಕನ ವಿರುದ್ದ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನು ಓದಿ :- ಸಿದ್ದಗಂಗಾ ಶ್ರೀಗಳ ಪಾತ್ರಕ್ಕೆ ಅಮಿತಾಭ್ ಬಚ್ಚನ್? ಹಂಸಲೇಖ ಸಾರಥ್ಯದಲ್ಲಿ ಮೂಡಿ ಬರಲಿದೆ ಸಿನಿ ಸೀರಿಸ್