ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶತಾಯುಷಿ ಎಚ್.ಎಸ್. ದೊರೆಸ್ವಾಮಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.
104 ವರ್ಷ ವಯಸ್ಸಿನ ದೊರೆಸ್ವಾಮಿ ಕೊರೊನಾ ಸೋಂಕಿನ ಕಾರಣ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆದ್ದ ದೊರೆಸ್ವಾಮಿ ಅವರನ್ನು ಬುಧವಾರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಕೋವಿಡ್ ಗೆದ್ದು ಬಂದಿರುವ ಈ ಹಿರಿಯ ಜೀವ ಇತರೆ ರೋಗಿಗಳಿಗೆ ಧೈರ್ಯ ತುಂಬುವಂತಾಗಿದೆ.