ಡೆಬಿಟ್ ಕಾರ್ಡ್ (Debit card) ಆಧರಿತ ನಗದು ವರ್ಗಾವಣೆ ಮತ್ತು ಯುಪಿಐ (Unified Payments Interface – UPI) ಆಧರಿತ ಹಣಕಾಸಿನ ವಹಿವಾಟಿಗೆ ಆಗುತ್ತಿರುವ ವೆಚ್ಚವನ್ನು ಭರ್ತಿ ಮಾಡಿಕೊಳ್ಳುವ ದೃಷ್ಟಿಯಿಂದ ಅಲ್ಪ ಪ್ರಮಾಣದ ಶುಲ್ಕ ವಿಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ಪರಿಶೀಲಿಸುತ್ತಿದೆ.
ಪ್ರತಿ ವಹಿವಾಟಿಗೆ ಇಂತಿಷ್ಟು ಮೊತ್ತ ಎಂದು ನಿಗದಿಪಡಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ. ‘ಪಾವತಿ ವ್ಯವಸ್ಥೆಗೆ ಶುಲ್ಕಗಳು’ ಹೆಸರಿನ ಕರಡು ಪ್ರಸ್ತಾವ ಪ್ರಕಟಿಸಿರುವ ಆರ್ಬಿಐ (RBI) ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ. ಒಂದು ವೇಳೆ ಆರ್ಬಿಐನ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ ಫೋನ್ ಪೆ (PHONE PAY) , ಗೂಗಲ್ ಪೆ (GOOGLE PAY) , ಭೀಮ್ ಸೇರಿದಂತೆ ಆ್ಯಪ್ಗಳ ಮೂಲಕ ನಡೆಯುವ ಯುಪಿಐ ಆಧರಿತ ಪೇಮೆಂಟ್ ವ್ಯವಸ್ಥೆಗೆ ಶುಲ್ಕ ವಿಧಿಸಲಾಗುತ್ತದೆ. ಸಾರ್ವಜನಿಕರು ನಡೆಸುವ ದೊಡ್ಡಮಟ್ಟದ ವಹಿವಾಟು ಅಥವಾ ಹೂಡಿಕೆ ಸಂದರ್ಭದಲ್ಲಿ ಆರ್ಬಿಐ ಒಂದಿಷ್ಟು ಕಾರ್ಯಾಚರಣೆ ವೆಚ್ಚ ಭರಿಸಬೇಕಾಗುತ್ತದೆ. ಇದನ್ನೂ ಓದಿ : – ಬಿಜೆಪಿಯವರಿಗೆ ಯಡಿಯೂರಪ್ಪ ಮೇಲೆ ವಿಶೇಷ ಪ್ರೀತಿ ಬಂದಿದೆ – ಎಂ.ಬಿ ಪಾಟೀಲ್ ವ್ಯಂಗ್ಯ
ಪ್ರಸ್ತುತ ಆರ್ಟಿಜಿಎಸ್ಗೆ ಲಾಭ ಗಳಿಕೆ ಉದ್ದೇಶದಿಂದ ಶುಲ್ಕ ವಿಧಿಸುತ್ತಿಲ್ಲ ಎಂದು ಆರ್ಬಿಐ ಹೇಳಿದೆ. ದೊಡ್ಡಮಟ್ಟದ ನಗದು ವರ್ಗಾವಣೆ ಸಂದರ್ಭದಲ್ಲಿ ಆರ್ಟಿಜಿಎಸ್ ಬಳಕೆಯಾಗುತ್ತಿದೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು ನಡೆಸುವ ಇಂಥ ವಹಿವಾಟು ಉಚಿತವಾಗಿ ಇರಬೇಕೆ ಎಂಬ ಬಗ್ಗೆಯೂ ಆರ್ಬಿಐ ಸಾರ್ವಜನಿಕರ ಸಲಹೆ ಕೋರಿದೆ.
ಇದನ್ನೂ ಓದಿ : – ಭವ್ಯ ಬಂಗಲೆಯಲ್ಲಿ ಈಜು ಕೊಳ ನಿರ್ಮಾಣ – ಮತ್ತೆ ವಿವಾದದಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್?