ಗಂಧದಗುಡಿ (Gandhagudi) ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ತುಮಕೂರಿನ ಜೈ ಭಾರತ್ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳ ಅಬ್ಬರ ಹೆಚ್ಚಾಗಿದೆ. ಅಪ್ಪು ಕಟೌಟ್ ಗೆ ಹಾರ ಹಾಕಿ ಸಂಭ್ರಮಿಸಿದ್ದಾರೆ. ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಶುಭಾರಂಭಕ್ಕೆ ಅಭಿಮಾನಿಗಳು ಆನೆ (Elephant) ತಂದು ಅಭಿಮಾನ ಮೆರೆದಿದ್ದಾರೆ. ಜೈ ಭಾರತ್ ಚಿತ್ರ ಮಂದಿರ ಆವರಣದಲ್ಲಿ ಆನೆ ಕುಣಿದಿದೆ. ಚಿತ್ರ ಆರಂಭ ಆಗುತಿದ್ದಂತೆ ಬಾಸ್, ಬಾಸ್ ಎಂದು ಅಭಿಮಾನಿಗಳು ಕೂಗಿದ್ದಾರೆ. ಸಿನಿಮಾ ಆರಂಭ ಆಗುತಿದ್ದಂತೆ ಸ್ಕ್ರೀನ್ ಮೇಲಿನ ಅಭಿಮಾನಿಗಳು ಅಪ್ಪು ಭಾವ ಚಿತ್ರಕ್ಕೆ ಪುಷ್ಪ ವೃಷ್ಠಿ ಮಾಡಿದ್ದಾರೆ. ಗಂಧದ ಗುಡಿ ನೋಡಿ ಸಿನಿಮಾ ಚೆನ್ನಾಗಿದೆ ಅಪ್ಪು ಸರ್ ಇರಬೇಕಿತ್ತು ಎಂದು ಅಭಿಮಾನಿ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ : – ಎಲಾನ್ ಮಸ್ಕ್ ತೆಕ್ಕೆಗೆ ಟ್ವಿಟ್ಟರ್ – CEO ಪರಾಗ್ ಅಗರ್ವಾಲ್ ಸೇರಿದಂತೆ ಪ್ರಮುಖರು ವಜಾ