ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಜನರ ಗೋಳು ಹೇಳತೀರದಾಗಿದೆ. ಕಸ ಹಾಗೂ ಕೆಮಿಕಲ್ ಮಂಜಿನಂತೆ ಗ್ರಾಮವನ್ನೇ ಆವರಿಸಿದೆ. ಇಡೀ ಗ್ರಾಮದಲ್ಲಿ ಹೊಗೆ ಆವರಿಸಿ ಉಸಿರಾಟಕ್ಕೂ ತೊಂದರೆಯಾಗಿದೆ. ಜಿಗಣಿ ಸಮೀಪದ ಬೊಮ್ಮಂಡಹಳ್ಳಿ ಗ್ರಾಮದ ಜನರಲ್ಲಿ ಆತಂಕ ಶುರುವಾಗಿದೆ. ರಾತ್ರೋರಾತ್ರಿ ಕಸ ತಂದು ಸುರಿದು ಬೆಂಕಿ ಹಚ್ಚುತ್ತಾರೆ. ಕಳೆದ ಐದಾರು ತಿಂಗಳಿಂದ ನಿರಂತರವಾಗಿ ಕಸ ತಂದು ಬೆಂಕಿ ಹಾಕಿ ಹೋಗ್ತಾರೆ. ಇದರ ಹೊಗೆಗೆ ಜನರು ಭಯಾನಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಕ್ಯಾನ್ಸರ್, ಜ್ವರ ಕೆಮ್ಮು ವಾಂತಿಯಿಂದ ಗ್ರಾಮಸ್ಥರು ಬಳಲಿ ಹೋಗಿದ್ದಾರೆ. ರಾತ್ರೋರಾತ್ರಿ ಬೆಂಗಳೂರಿನ ಕಸ ತಂದು ಹೆಸರಾಂತ ಯೋಗ ಅನುಸಂಧಾನ ಕೇಂದ್ರದ ಪಕ್ಕದಲ್ಲೇ ಸುರಿದು ಹೋಗ್ತಾರೆ. ಇಡೀ ಗ್ರಾಮದಲ್ಲಿ ಖಾಲಿ ಇರುವ ಜಾಗದಲ್ಲೆಲ್ಲ ಕಸದ ರಾಶಿ ಕಂಡು ಬರುತ್ತಿದೆ. ಬೆಂಗಳೂರಿನ ಆಸ್ಪತ್ರೆ ತ್ಯಾಜ್ಯ, ಹೋಟೆಲ್ ತ್ಯಾಜ್ಯಕ್ಕೆ ಗ್ರಾಮಸ್ಥರು ಹೈರಾಣಾಗಿ ಹೋಗಿದ್ದಾರೆ.
ಇದನ್ನು ಓದಿ :- ಬೆಳಗಾವಿ ಮಹಾನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ – ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
ಇದನ್ನು ಓದಿ :- ಬೇಸಿಗೆ ದಾಹಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್ – ನಿರ್ಲಕ್ಷ್ಯಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ…