ಗುಲಾಂ ನಬಿ ಆಜಾದ್ ಡಿಎನ್ಎ “ಮೋದಿ-ಫೈಡ್” ಆಗಿದೆ ಎಂದು ಕಾಂಗ್ರೆಸ್ ( congress ) ನಾಯಕ ಜೈರಾಮ್ ರಮೇಶ್ ( jay ram ramesh ) ತಿರುಗೇಟು ನೀಡಿದ್ದಾರೆ.
ರಾಜ್ಯಸಭಾ ಅಧಿಕಾರಾವಧಿಯ ಅಂತ್ಯಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡಿ ದ್ರೋಹ ಬಗೆದಿರುವುದು ಅವರ ನಿಜವಾದ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
“ಕಾಂಗ್ರೆಸ್ ನಲ್ಲಿ ಎಲ್ಲಾ ಹುದ್ದೆಗಳನ್ನ ಅಲಂಕರಿಸಿ ಅತ್ಯಂತ ಗೌರವದಿಂದ ನಡೆಸಿಕೊಳ್ಳಲ್ಪಟ್ಟ ವ್ಯಕ್ತಿಯೊಬ್ಬರು ತಮ್ಮ ಕೆಟ್ಟ ವೈಯಕ್ತಿಕ ದಾಳಿಯಿಂದ ದ್ರೋಹ ಬಗೆದಿದ್ದಾರೆ. ಇದು ಅವರ ನೈಜ ಸ್ವರೂಪವನ್ನು ಬಹಿರಂಗಪಡಿಸುತ್ತದೆ. ಗುಲಾಂ ನಬಿ ಆಜಾದ್ ಡಿಎನ್ಎ ಮೋದಿ-ಫೈಡ್ ಆಗಿದೆ” ಎಂದು ಜೈರಾಮ್ ರಮೇಶ್ ಗೇಲಿ ಮಾಡಿದ್ದಾರೆ. ಇದನ್ನೂ ಓದಿ : – ಕೈಗೆ ಗುಡ್ ಬೈ ಬೆನ್ನಲ್ಲೇ ಹೊಸ ರಾಜಕೀಯ ಪಕ್ಷ ಕಟ್ಟಲು ಗುಲಾಂ ನಬಿ ಆಜಾದ್ ನಿರ್ಧಾರ
ಆಜಾದ್ ರಾಜೀನಾಮೆಗೆ ಖರ್ಗೆ ಬೇಸರ
ಕಾಂಗ್ರೆಸ್ ಗೆ ಗುಲಾಂ ನಬಿ ಆಜಾದ್ (Ghulam Nabi Azad’s) ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ರಾಜ್ಯ ಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಜಾದ್ ರಾಜೀನಾಮೆ ನೋಡಿ ಬೇಸರ ಆಗಿದೆ. ಐದು ದಶಕಗಳ ಕಾಲ ಪಕ್ಷ ಸಂಘಟನೆ ಮಾಡಿದ್ದಾರೆ. ಪಕ್ಷವೂ ಕೂಡ ಅವರ ನಿರೀಕ್ಷೆಗೂ ಮೀರಿ ಅವಕಾಶ ಕೊಟ್ಟಿದೆ. ಅಧಿಕಾರದಲ್ಲಿರುವ ಕೋಮುವಾದಿ ಪಕ್ಷ ಸಂವಿಧಾನದ ಆಶಯಗಳ ಮೇಲೆ ಅಲ್ಪಸಂಖ್ಯಾತ, ದೀನ ದಲಿತರ ಮೇಲೆ ಹಲ್ಲೆ ನಡೆಸುತ್ತಿದೆ.
ಇದರ ವಿರುದ್ಧ ರಾಹುಲ್ ಗಾಂಧಿ ( rahul handhi ) ನೇತೃತ್ವದಲ್ಲಿ ದೇಶ ಒಗ್ಗೂಡಿಸುವ ಕೆಲಸ ನಡೆಯುತ್ತಿದೆ. 3500 ಕಿಲೋ ಮೀಟರ್ ಪಾದಯಾತ್ರೆ ಆಯೋಜನೆ ಮಾಡಲಾಗಿದೆ. ಇಂತಹ ಸಂದರ್ಭಗಳಲ್ಲಿ ಪಕ್ಷ ಬಿಟ್ಟು ಹೋಗುವುದು ಕೋಮುವಾದಿಗಳ ವಿರುದ್ಧದ ಹೋರಾಟ ದುರ್ಬಲಗೊಳಿಸಿದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಸಮಯದಲ್ಲಿ ಬಿಟ್ಟು ಹೋದ್ರೆ ಅವರ ಬದ್ಧತೆಯ ಮೇಲೆ ಪ್ರಶ್ನೆ ಮೂಡುತ್ತದೆ. ಅಲ್ಲದೆ ಪರೋಕ್ಷವಾಗಿ ಕೋಮುವಾದಿ ಶಕ್ತಿಗಳಿಗೆ ಸಹಕರಿಸುತ್ತಿದಂತಾಗುತ್ತದೆ ಎಂದು ಗುಲಾಂ ನಬಿ ಆಜಾದ್ ಮೇಲೆ ಮಲ್ಲಿಕಾರ್ಜುನ ಖರ್ಗೆ ( mallikarjun kharge ) ಬೇಸರವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : – ನಟಿ ಸೋನಾಲಿ ಸಾವಿಗೆ ಬಿಗ್ ಟ್ವಿಸ್ಟ್ – ಮರಣೋತ್ತರ ಪರೀಕ್ಷೆಯಲ್ಲಿ ದೇಹದ ಮೇಲೆ ಗಾಯ ಪತ್ತೆ