ತುಮಕೂರು (tumkuru )ನಗರದ ಬೆಳಗುಂಬ ಗ್ರಾಮ ಪಂಚಾಯಿತಿಯ ಖಾತೆ ನಂ 99 ರ ಸರ್ಕಾರಿ ಜಾಗ ಮತ್ತು ಬಾವಿ ಹುಡುಕಿಕೊಡಿ ಎಂದು ಗ್ರಾಮಸ್ಥರು ದಾಖಲೆ ಹಿಡಿದು ಮನವಿ ಮಾಡಿದ್ದಾರೆ . ಖಾತೆ ನಂ 99 ರ ಜಾಗವೇ ಇಲ್ಲ ಎಂದ ಪಿಡಿಓ ಕೃಷ್ಣಮೂರ್ತಿ ಹೇಳಿದ್ದಾರೆ.
ಖಾತೆ ನಂ 99/2 ರ ಬದಲಾಗಿ ಖಾತೆ 99 ರ ಜಾಗ ತೆರವುಗೊಳಿಸಿರೋ ಆರೋಪ ಕೇಳಿ ಬಂದಿದೆ.ನೂರಾರು ವರ್ಷಗಳ ಸರ್ಕಾರಿ ಬಾವಿ ನೆಲಸಮ ಮಾಡಿ ಮಲ್ಲಿಕಾರ್ಜುನಸ್ವಾಮಿ ಎಂಬುವವರು ಕಾಂಪೌಂಡ್ ಹಾಕಿದ್ದಾರೆ . ಕೋಟ್೯ ಆದೇಶ ಇದೆ ಎಂದು ಮಲ್ಲಿಕಾರ್ಜುನಸ್ವಾಮಿಗೆ ಕೃಷ್ಣಮೂರ್ತಿ ಸಹಕಾರ ನೀಡಿದ್ದಾರೆ . ಬಾವಿ ನೆಲಸಮ ಮಾಡುತ್ತಿದ್ದಂತೆ ಸ್ಥಳೀಯರು ದಾಖಲೆ ಹಿಡಿದು ಬಂದಿದ್ದಾರೆ. ಇದು ಸರ್ಕಾರಿ ಬಾವಿ ಇರೋ ಸ್ಥಳ ಅಂದ್ರು ಅಧಿಕಾರಿಗಳು ಖ್ಯಾರೆ ಅಂದಿಲ್ಲ. ಹೀಗಾಗಿ ಖಾತೆ ನಂ 99ರ ಸರ್ಕಾರಿ ಜಾಗ ಹಾಗೂ ಬಾವಿ ಹುಡುಕಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದನ್ನೂ ಓದಿ : –ಅಮೆರಿಕಾದ ಟೆಕ್ಸಾಸ್ ಶಾಲೆಯಲ್ಲಿ ಗುಂಡಿನ ದಾಳಿ -18 ಮಕ್ಕಳು ಸೇರಿ 21 ಮಂದಿಯ ಹತ್ಯೆ