ಜಮಖಂಡಿ (Jamkhandi) ತಾಲ್ಲೂಕಿನ ಹುನ್ನೂರ ಗ್ರಾಮದಲ್ಲಿ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ (Urdu high school) ಹತ್ತಿರ ಗಟ್ಟಾರ ಇದ್ದು ಕೊಳಚೆ ನೀರು ಮುಂದೆ ಹೋಗದೆ ಗಬ್ಬೆದು ನಾರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಶಾಲಾ ಮಕ್ಕಳ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ.
ಪಂಚಾಯಿತಿಯ ಸಂಬಂಧಪಟ್ಟ ಕಾಮಗಾರಿ ಅರ್ಧಕ್ಕೆ ನಿಂತ ಕಾರಣ ಈ ಸಮಸ್ಯೆ ಉಂಟಾಗಿದೆ. ಶಾಲೆಯ ಪಕ್ಕದಲ್ಲಿ ನಿಂತ ಕೊಳಚೆ ನೀರು ಹಂದಿಗಳ ತಾಣವಾಗಿದೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದಾರೆ. ಆದರೆ ಇದುವರೆಗೂ ಯಾವುದೇ ಪರಿಹಾರ ಆಗಿಲ್ಲ. ಶಾಲೆ ಪಕ್ಕದಲ್ಲಿ ನಿಂತ ಕೊಳಚೆ ನೀರಿನಿಂದ ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ ಎಂದು ಮುಖ್ಯ ಗುರುಗಳು ಆರೋಪಿಸಿದ್ದಾರೆ. ಈ ದುರ್ವಾಸನೆಯಿಂದ ಶಾಲೆಯ ಕೋಣೆಯೊಳಗೆ ಕುಳಿತು ಪಾಠ ಕಲಿಯಬೇಕಾದ ಮಕ್ಕಳು ಹೊರಗಡೆ ಕುಳಿತು ಪಾಠವನ್ನು ಕಲಿತುಕೊಳ್ಳುವ ದುರ್ಗತಿ ಬಂದಿದೆ. ಇದನ್ನೂ ಓದಿ : – ಕಾಡುಹಂದಿಗಳ ಕಾಟಕ್ಕೆ ಗೋವಿನಜೋಳ ಬೆಳೆ ನಾಶ – ಸಂಕಷ್ಠದಲ್ಲಿ ಅನ್ನದಾತ
ಎಸ್ ಡಿ.ಎಮ್.ಸಿ.ಅಧ್ಯಕ್ಷ ಹಾಗೂ ಶಾಲಾ ಮುಖ್ಯ ಗುರುಗಳು ಹಾಗೂ ಸ್ಥಳಿಯರು ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲಿಸಿದ್ದರು ಪ್ರಯೋಜನವಾಗುತ್ತಿಲ್ಲ . ಬರಿ ಆಶ್ವಾಸನೆ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಸ್ಥಳಿಯರು ಗಂಭೀರವಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ : – ಲಸಿಕೆ ಲಭ್ಯ ಇದ್ರೂ ತೆಗೆದುಕೊಳ್ಳದೇ ಇರುವುದು ಮಹಾಪರಾಧ – ಕೆ. ಸುಧಾಕರ್