ಬಿಬಿಎಂಪಿ (BBMP) ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ (SUPREMCOURT) ಸೂಚನೆ ನೀಡಿದೆ. ಈ ಕುರಿತಂತೆ ಸಿಎಂ ಬಸವರಾಜ್ ಬೊಮ್ಮಾಯಿ (BASAVARAJBOMMAI) ಪ್ರತಿಕ್ರಿಯಿಸಿದ್ದಾರೆ. ಸುಪ್ರೀಂ ಕೋರ್ಟ್ ಎಂಟು ವಾರದಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಸಲು ಸೂಚಿಸಿದೆ. ಸುಪ್ರೀಂ ಕೋರ್ಟ್ ತೀರ್ಪನ್ನ ನಾವು ಸ್ವಾಗತಿಸುತ್ತೇವೆ.
ಚುನಾವಣೆಗೆ ಸಂಬಂಧಿಸಿದ ಡಿ ಲಿಮಿಟೇಷನ್ ಪ್ರಕ್ರಿಯೆ ಅಂತಿಮ ಅಂತದಲ್ಲಿದೆ. ಎಂಟು ವಾರದಲ್ಲಿ ಚುನಾವಣಾ ಪ್ರಕ್ರಿಯೆ ಶುರುವಾಗಲಿದೆ. ಈ ಸಂಬಂಧ ಸಮಿತಿ ಕೂಡ ಮಾಡಿದ್ದೇವೆ. ಆದಷ್ಟು ಬೇಗ ಚುನಾವಣೆ ನಡೆಸ್ತೀವಿ. ಹಿಂದಿನ ಆದೇಶದಲ್ಲಿ ಮೀಸಲಾತಿ ಇಲ್ಲ ಅಂತ ತೀರ್ಪು ನೀಡಿತ್ತು.
ನಂತರ OBC ಮೀಸಲಾತಿ ಸಹಿತ ಚುನಾವಣೆ ಮಾಡಲು ಸೂಚನೆ ನೀಡಿತ್ತು. ನಾವು ಕೂಡ OBC ಮೀಸಲಾತಿ ಇಲ್ಲದೆ ಚುನಾವಣೆ ನಡೆಸಲ್ಲ ಅಂತ ನಾವು ಹೇಳಿದ್ದೆವು. ಈಗ ನಮ್ಮ ಮನ್ನಣೆಯಂತೆ OBC ಮೀಸಲಾತಿಯೊಂದಿಗೆ ಚುನಾವಣೆ ನಡೆಸಲು ಅನುಮತಿ ದೊರೆತಿದೆ. ಕೋರ್ಟ್ ತೀರ್ಪನ್ನ ಸರ್ಕಾರ ಪಾಲಿಸಲಿದ್ದು ನಾವು ಚುನಾವಣೆಗೆ ಸಿದ್ದರಿದ್ದೇವೆ ಎಂದ ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ :- ಕೆನಡಾದಲ್ಲಿ ಕನ್ನಡ ಡಿಂಡಿಮ ಮೊಳಗಿಸಿದ ಚಂದ್ರ ಆರ್ಯ ಯಾರು ಗೊತ್ತಾ..?