ತುಮಕೂರಿನಲ್ಲಿ ಬಂಧಿತ NSUI ಕಾರ್ಯಕರ್ತರನ್ನು ಜಿಲ್ಲಾ ಕಾರಾಗೃಹದಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಭೇಟಿ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಪರಮೇಶ್ವರ್ ಪ್ರತಿಭಟನೆ ಮಾಡಿದ್ದ NSUI ಕಾರ್ಯಕರ್ತರ ಬಂಧನ ಖಂಡನೀಯ ಎಂದು ಕಿಡಿಕಾರಿದ್ರು.
ಅಂಬೇಡ್ಕರ್, ಬಸವಣ್ಣ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ವಿಚಾರ ತಿರುಚಿದ್ದಾರೆ. ಹಾಗಾಗಿ ಅವರು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ನಮ್ಮ ಹಕ್ಕು. ಮನೆಯೊಳಗೆ ನುಗ್ಹಿದ್ರು ಬೆಂಕಿ ಹಚ್ಚಿದ್ರು ಎಂದು ಸುಳ್ಳು ದೂರು ದಾಖಲಿಸಿದ್ದಾರೆ. ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ. ಬೇಲ್ ನಿಂದ ಅವರು ಹೊರಗೆ ಬರುತ್ತಾರೆ ಎಂದು ಪರಮೇಶ್ವರ್ ತಿಳಿಸಿದ್ರು. ವಿದ್ಯಾರ್ಥಿಗಳ ಮನಸ್ಸು ಹಾಳು ಮಾಡುವ ಕೆಲಸ ಸರ್ಕಾರ ಮಾಡಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ರು. ಬಂಧಿತರಿಗೆ ಇಂದು ಜಾಮೀನು ಸಿಗುತ್ತದೆ ಎಂಬ ನಿರೀಕ್ಷೆ ಇದೆ. ಪ್ರವಾದಿ ವಿರುದ್ಧ ಹೇಳಿಕೆಗೆ ಭಾರತ ಕ್ಷಮೆ ಕೇಳಬೇಕು ಎಂದು ಇರಾನ್ ಇರಾಕ್ ರಾಷ್ಟ್ರಗಳ ಒತ್ತಾಯ ಕುರಿತಂತೆ ಪ್ರತಿಕ್ರಿಯಿಸಿದ ಪರಮೇಶ್ವರ್ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿದೆ. ಯಾರಾದರೂ ನಾಯಕರು ಹೇಳಿಕೆ ಕೊಟ್ಟರೆ ಬಿಜೆಪಿ ಅದನ್ನು ಸಮರ್ಥಿಸಿಕೊಳ್ಳಬೇಕು. ಇಲ್ಲ ಆ ಹೇಳಿಕೆ ನಮ್ಮದಲ್ಲ ಎಂದು ಹೇಳಬೇಕು. ಇದನ್ನೂ ಓದಿ :- ನಿಖಿಲ್ ಕುಮಾರಸ್ವಾಮಿ ಪುತ್ರನಿಗೆ ನಾಮಕರಣ – ದೊಡ್ಡಗೌಡರ ಮರಿಮೊಮ್ಮಗನ ಹೆಸರೇನು ಗೊತ್ತಾ..?
ಬೇರೆ ದೇಶಗಳಿಂದ ಪ್ರತಿಕ್ರಿಯೆ ಬರುವ ಮೊದಲು ಬಿಜೆಪಿ ಅದಕ್ಕೆ ಸ್ಪಷ್ಟನೆ ಕೊಡಬೇಕಿತ್ತು ಎಂದು ಪರಮೇಶ್ವರ್ ಹೇಳಿದ್ದಾರೆ. ಇವತ್ತು ಭಾರತದ ಮಾನ ಹರಾಜು ಹಾಕುವ ಸ್ಥಿತಿಗೆ ಬಂದಿದೆ. ಹೋರದೇಶದಿಂದ ಬೆದರಿಕೆ ಬರುತ್ತಿದೆ.
ಆಲ್ ಖೈದಾದವರು ನಾವು ಬಾಂಬೆಯಲ್ಲಿ ಮತ್ತೆ ನಮ್ಮ ಚಟುವಟಿಕೆ ಶುರು ಮಾಡುತ್ತೇವೆ ಎಂಬ ಹಂತಕ್ಕೆ ತಲುಪಿದೆ. ಇದಕ್ಕೆ ಬಿಜೆಪಿ ಸರ್ಕಾರವೇ ನೇರ ಕಾರಣ ಎಂದು ಆಕ್ರೋಶ ಹೊರಹಾಕಿದ್ರು. ಬಿಜೆಪಿ ಸರ್ಕಾರದ ನಮ್ಮ ದೇಶವನ್ನು ಪ್ರತಿನಿಧಿಸ್ತಾ ಇದ್ದು ಬಿಜೆಪಿ ಕ್ಷಮೆ ಕೇಳಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ :- ಮೈದಾನದ ಮಾಲೀಕರು ಯಾರು ಅಂತ ಹೇಳ್ತಾರೋ ಅವ್ರು ದಾಖಲೆ ಇದ್ದರೆ ಕೊಡಲಿ – ತುಷಾರ್ ಗಿರಿನಾಥ್