ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಏಕಲವ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( BASAVARAJ BOMMAI ) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಏಕಲವ್ಯ ಕ್ರೀಡಾ ಪ್ರಶಸ್ತಿ ಹಾಗೂ ಇತರ ಕ್ರೀಡಾ ಪ್ರಶಸ್ತಿ ಪ್ರದಾನ ಮಾಡಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
ಇಂದು ರಾಜಭವನದಲ್ಲಿ ನಡೆದ ಏಕಲವ್ಯ ಕ್ರೀಡಾ ಪ್ರಶಸ್ತಿ ಹಾಗೂ ಇತರ ಕ್ರೀಡಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ,ಘನತೆವೆತ್ತ ರಾಜ್ಯಪಾಲರಾದ ಶ್ರೀ @TCGEHLOT ಅವರೊಂದಿಗೆ ಪಾಲ್ಗೊಂಡು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ, ಶುಭ ಹಾರೈಸಿದೆ. pic.twitter.com/bpBnLIKVKA
— Basavaraj S Bommai (@BSBommai) December 6, 2022
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ, ಶಾಸಕ ರಿಜ್ವಾನ್ ಅರ್ಷದ್, ಕರ್ನಾಟಕ ಓಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ( GOVINDARAJU ) ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮೊದಲಾದವರು ಉಪಸ್ಥಿತರಿದ್ದರು.
2021ನೇ ಸಾಲಿನ "ಏಕಲವ್ಯ " ಜೀವಮಾನ ಸಾಧನೆ ಕರ್ನಾಟಕ ಕ್ರೀಡಾ ರತ್ನ ಹಾಗೂ 2022-23 ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ, 36 ನೇ ರಾಷ್ಟ್ರೀಯ ಕ್ರೀಡಾಕೂಟದ ಪದಕ ವಿಜೇತ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಪ್ರಧಾನ ಸಮಾರಂಭ, ಬೆಂಗಳೂರು. https://t.co/po4j5FKDD0
— Basavaraj S Bommai (@BSBommai) December 6, 2022
2021ನೇ ಸಾಲಿನ ಏಕಲವ್ಯ ಪ್ರಶಸ್ತಿ ಪುರಸ್ಕೃತರು
1. ಚೇತನ್ ಬಿ – ಅಥ್ಲೇಟಿಕ್ಸ್
2. ಶಿಖಾ ಗೌತಮ್ – ಬ್ಯಾಡ್ಮಿಂಟನ್
3. ಕೀರ್ತಿ ರಂಗಸ್ವಾಮಿ – ಸೈಕ್ಲಿಂಗ್
4. ಅದಿತ್ರಿ ವಿಕ್ರಾಂತ್ ಪಾಟೀಲ್ – ಫೆನ್ಸಿಂಗ್
5. ಅಮೃತ್ ಮುದ್ರಾಬೆಟ್ – ಜಿಮ್ನಾಸ್ಟಿಕ್
6. ಶೇಷೇಗೌಡ ಬಿ.ಎಂ – ಹಾಕಿ
7. ರೇಷ್ಮಾ ಮರೂರಿ – ಲಾನ್ ಟೆನ್ನಿಸ್
8. ತನೀಷ್ ಜಾರ್ಜ್ ಮ್ಯಾಥ್ಯು – ಈಜು
9. ಯಶಸ್ವಿನಿ ಘೋರ್ಪಡೆ – ಟೇಬಲ್ ಟೆನ್ನಿಸ್
10. ಹರಿಪ್ರಸಾದ್ – ವಾಲಿಬಾಲ್
11. ಸೂರಜ್ ಸಂಜು ಅಣ್ಣೀಕೇರಿ – ಕುಸ್ತಿ
12. ಹೆಚ್.ಎಸ್.ಸಾಕ್ಷಾತ್ – ನೆಟ್ ಬಾಲ್
13. ಮನೋಜ್ ಬಿ.ಎಂ – ಬಾಸ್ಕೆಟ್ ಬಾಲ್.
14. ರಾಘವೇಂದ್ರ ಪಿ – ಪ್ಯಾರಾ ಅಥ್ಲೆಟಿಕ್ಸ್
ಏಕಲವ್ಯ ಪ್ರಶಸ್ತಿಯು ಏಕಲವ್ಯ ಕಂಚಿನ ಪ್ರತಿಮೆ, ಪ್ರಶಸ್ತಿ ಪತ್ರ, ಸಮವಸ್ತ್ರ, 2 ಲಕ್ಷ ರೂ. ನಗದು ಬಹುಮಾನ ಒಳಗೊಂಡಿರುತ್ತದೆ.
ಇದನ್ನೂ ಓದಿ : – ಕಾಫಿನಾಡಲ್ಲಿ ದತ್ತಜಯಂತಿ ಸಂಭ್ರಮ – ಅನುಸೂಯ ದೇವಿ ದರ್ಶನಕ್ಕೆ ತೆರಳಿದ ಸಾವಿರಾರು ಮಹಿಳೆಯರು