ಕೋವಿಡ್ ಲಸಿಕೆ ಕುರಿತು ಕೇಂದ್ರ ಸರಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಕೆಲವು ವರ್ಗದ ಜನರಿಗೆ ಕೋವಿಡ್ ಲಸಿಕೆ ಪಡೆಯದಂತೆ ಕೇಂದ್ರ ಸರಕಾರ ತಡೆ ಹಿಡಿದಿದೆ.
ಕೇಂದ್ರ ಲಸಿಕೆ ತಜ್ಞರ ಸಮಿತಿ (ಎನ್ಇಜಿವಿಎಸಿ) ನೀಡಿದ ಸಲಹೆ ಮೇರೆಗೆ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ನೂತನ ಮಾರ್ಗಸೂಚಿ ಪ್ರಕಾರ ಕೆಲವು ವರ್ಗದ ಜನರು ತಡವಾಗಿ ಲಸಿಕೆ ಪಡೆಯುವುದು ಉತ್ತಮ ಎಂದು ಸೂಚಿಸಿದೆ.
ಜಾಗತಿಕ ಮಟ್ಟದಲ್ಲಿ ನಡೆದ ಸಂಶೋಧನೆ ಹಾಗೂ ಸಮೀಕ್ಷೆಗಳ ಆಧಾರದಲ್ಲಿ ಕೋವಿಡ್ ಅದರಲ್ಲೂ ಡಬಲ ಮ್ಯೂಟೆಂಟ್ ಸೋಂಕಿನಿಂದ ಚೇತರಿಸಿಕೊಂಡವರು ಕನಿಷ್ಠ 6 ತಿಂಗಳ ನಂತರ ಲಸಿಕೆ ಪಡೆಯುವುದು ಉತ್ತಮ ಎಂದು ಹೇಳಿದೆ.
ಪ್ಲಾಸ್ಮಾ ಥೆರಪಿ ಸೇರಿದಂತೆ ಇನ್ನಿತರೆ ಮಾರ್ಗದ ಮೂಲಕ ಕೋವಿಡ್ ನಿಂದ ಚೇತರಿಸಿಕೊಂಡ ನಂತರ ಕನಿಷ್ಠ 3 ತಿಂಗಳ ನಂತರ ಲಸಿಕೆ ಪಡೆಯಬಹುದಾಗಿದೆ. ಏಕೆಂದರೆ ಕೋವಿಡ್ ನಿಂದ ಚೇತರಿಸಿಕೊಂಡ ನಂತರ ಲಸಿಕೆ ಪ್ರಭಾವ ತಡೆದುಕೊಳ್ಳುವ ಶಕ್ತಿ ದೇಹಕ್ಕೆ ಅಗತ್ಯ ಸಮಯಬೇಕಾಗಿದೆ. ತಕ್ಷಣವೇ ಲಸಿಕೆ ಪಡೆದರೆ ಅಲರ್ಜಿ ಸೇರಿದಂತೆ ವಿವಿಧ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಗರ್ಭಿಣಿಯರು ಲಸಿಕೆ ಪಡೆಯುವ ಬಗ್ಗೆ ಸ್ವಂತ ನಿರ್ಧಾರ ಕೈಗೊಳ್ಳಬಹುದು. ಆದರೆ ಋತುಮತಿ ವೇಳೆ ಮಹಿಳೆಯರು ಲಸಿಕೆ ಪಡೆಯಬಹುದು.