ಮೃತ ಪಟ್ಟ ಪತಿರಾಯ ಹಾವಿನ ರೂಪದಲ್ಲಿ ಬಂದಿದ್ದಾನೆ ಎಂದು ನಂಬಿದ ಅಜ್ಜಿಯೊಬ್ಬರು ಕಳೆದ 4 ದಿನಗಳಿಂದ ಹಾವಿನ ಜೊತೆಗೆ ಇರುವ ಮೂಲಕ ಅಜ್ಜಿಯೊಬ್ಬರು ಆಶ್ಚರ್ಯ ಮೂಡಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಜ್ಜಿಯ ನಂಬಿಕೆ ಬಗ್ಗೆ ಸ್ಥಳೀಯ ಜನರು ಆಗಮಿಸಿ, ವಿಸ್ಮಯ ದಂತೆ ನೋಡಲು ಮುಗಿ ಬೀಳುತ್ತಿದ್ದಾರೆ. ಸಾರವ್ವಾ ಮೋನೇಶ್ ಕಂಬಾರ ಎಂಬುವರ ಬಡ ಕುಟುಂಬದಲ್ಲಿ ಈ ಅಜ್ಜಿಯ ಮನೆಯಲ್ಲಿ 4 ದಿನಗಳ ಹಿಂದೆ ನಾಗರ ಹಾವು ಬಂದಿದೆ. ಅದನ್ನು ಹೂರಗೆ ಹಾಕಲು ಪ್ರಯತ್ನ ಪಟ್ಟರು ಹೋಗಲಿಲ್ಲ, ಇದರಿಂದ ಅಜ್ಜಿಯು ಆತಂಕಗೊಳ್ಳದೆ,ತನ್ನ ಪತಿ ಹಾವಿನ ರೂಪದಲ್ಲಿ ಬಂದಿರುವುದಾಗಿ ನಂಬಿದ್ದಾಳೆ. ಇದನ್ನೂ ಓದಿ : – ಶಿಕ್ಷಣ ಸಚಿವರ ಮನೆ ಮೇಲಿನ ದಾಳಿ ಪ್ರಕರಣ – ಬಂಧಿತರನ್ನ ಭೇಟಿ ಮಾಡಲಿರೋ ಡಿಕೆಶಿ
ಅಜ್ಜಿ ಯ ಪತಿ ಮೋನೇಶ ಎಂಬುವರು ಹಲವು ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ. ಅವರೆ ಈ ಹಾವಿನ ರೂಪದಲ್ಲಿ ಬಂದು ನನ್ನ ಹತ್ತಿರ ಇದ್ದಾರೆ. ಅದಕ್ಕೆ ಯಾರು ದಕ್ಕೆ ಮಾಡಬಾರದು ಹಿಡಿಯಬಾರದು ಎಂದು ಅದನ್ನ 4 ದಿನಗಳಿಂದ ಅವರ ಚಾಪೆ ಮೇಲೆ ಇರಸಿ,ಅದನ್ನು ಜೋಪಾನ ಮಾಡುತ್ತಿದ್ದಾರೆ. ಇದರಿಂದ ಅಜ್ಜಿಯ ನಂಬಿಕೆ ಹಾಗೂ ನಾಗರ ಹಾವನ್ನು ನೋಡಲು ಸುತ್ತಮುತ್ತಲಿನ ಜನ ಮುಗಿ ಬಿದ್ದಿದ್ದಾರೆ.
ಇದನ್ನೂ ಓದಿ : – ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ- ಸುರಕ್ಷಿತ ಸ್ಥಳಗಳಿಗೆ 177 ಕಾಶ್ಮೀರ ಪಂಡಿತ್ ಶಿಕ್ಷಕರ ಸ್ಥಳಾಂತರ