10 ಮಕ್ಕಳನ್ನು ಹೆತ್ತವರಿಗೆ ಭರ್ಜರಿ ಪುರಸ್ಕಾರ ..! ಇದು ಎಲ್ಲಿ ಗೊತ್ತಾ…?

ಕೊವಿಡ್-19 (COVID 19) ಸಾಂಕ್ರಾಮಿಕ ಪಿಡುಗು ಮತ್ತು ಉಕ್ರೇನ್ (UKRAIN) ಸಂಘರ್ಷದ ನಂತರ ರಷ್ಯಾ (RUSSIA)ದ ಜನವಸತಿ ಮತ್ತು ಜನವಾಸ್ತವ್ಯದಲ್ಲಿ ಆಗಿರುವ ಏರುಪೇರು ಸರಿಪಡಿಸಲು ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಮುಂದಾಗಿದ್ದಾರೆ.

10 ಅಥವಾ ಅದಕ್ಕಿಂತಲೂ ಹೆಚ್ಚಿನ ಮಕ್ಕಳ (CHILDRENS) ನ್ನು ಹೆರುವ ತಾಯಂದಿರಿಗೆ 10 ಲಕ್ಷ ರೂಬಲ್  ನಗದು ಪುರಸ್ಕಾರ ನೀಡುವುದಾಗಿ ಘೋಷಿಸಿದ್ದಾರೆ. ರಷ್ಯದಲ್ಲಿ ಸಾಂಪ್ರದಾಯಿಕ ರಷ್ಯನ್ ಜನರನ್ನು ಉಳಿಯುವಂತೆ ಮಾಡಲು ಪುಟಿನ್ ನಡೆಸುತ್ತಿರುವ ಹತಾಶ ಪ್ರಯತ್ನ ಇದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಈ ಯೋಜನೆಗೆ ‘ತಾಯಿಯೇ ನಾಯಕಿ’ (Mother Heroine) ಎಂದು ನಾಮಕರಣ ಮಾಡಿದ್ದಾರೆ. ಜನಸಂಖ್ಯೆಯ ಕುಸಿತಕ್ಕೆ ತಡೆಯೊಡ್ಡಲು ಪುಟಿನ್ ಅನುಷ್ಠಾನಗೊಳಿಸಿರುವ ಕ್ರಮ ಇದು. ರಷ್ಯಾದಲ್ಲಿ ಮತ್ತೊಮ್ಮೆ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಪಿಡುಗು ವ್ಯಾಪಕವಾಗಿ ಹರಡಿದರೆ ಸಹಜವಾಗಿಯೇ ಸಾವಿನ ಪ್ರಮಾಣ ಹೆಚ್ಚಾಗಲಿದೆ. ಇದರ ಜೊತೆಗೆ ಉಕ್ರೇನ್ ಜೊತೆಗಿನ ಸಂಘರ್ಷ ಆರಂಭವಾದ ನಂತರ ಈವರೆಗೆ ರಷ್ಯಾದ 50,000ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾರೆ. ರಷ್ಯಾದ ಜನಸಂಖ್ಯೆಯ ಮೇಲೆ ಇದು ಪರಿಣಾಮ ಬೀರಿದೆ. ಇದನ್ನೂ ಓದಿ : – ರಾಯಚೂರು ತೆಲಂಗಾಣಕ್ಕೆ ಸೇರಬೇಕು-  ಕಿಡಿ ಹೊತ್ತಿಸಿದ ಸಿಎಂ ಕೆ. ಚಂದ್ರಶೇಖರ್ ರಾವ್

ದೊಡ್ಡ ಕುಟುಂಬ ಹೊಂದಿರುವವರು ಹೆಚ್ಚು ದೇಶಭಕ್ತರಾಗಿರುತ್ತಾರೆ ಎಂದು ಪುಟಿನ್ ಹೇಳಿದ್ದಾರೆ. ಸೊವಿಯತ್ (Soviet) ಕಾಲದಲ್ಲಿ ಅಂದರೆ 90ರ ದಶಕಕ್ಕೂ ಮೊದಲು ರಷ್ಯಾದಲ್ಲಿ ಇಂಥದ್ದೇ ಯೋಜನೆ ಜಾರಿಯಲ್ಲಿತ್ತು. ರಷ್ಯಾದ ಜನಸಂಖ್ಯೆಯ ವೈವಿಧ್ಯತೆಯನ್ನು ಕಾಪಾಡುವ ಉದ್ದೇಶದಿಂದ ಪುಟಿನ್ ‘ಮದರ್ ಹಿರೋಯಿನ್’ ಯೋಜನೆಯನ್ನುಈಗ  ಮತ್ತೊಮ್ಮೆ ಜಾರಿಗೊಳಿಸಿದ್ದಾರೆ.

ಇದನ್ನೂ ಓದಿ : –  ಇನ್ಮುಂದೆ UPI ಫೋನ್ ಪೇ, ಗೂಗಲ್ ಪೇ, ಭೀಮ್ ವಹಿವಾಟು ದುಬಾರಿ..!  ಶುಲ್ಕ ವಿಧಿಸಲು RBI ಚಿಂತನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!