ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಿಕ್ಕಮಳೂರು ಗ್ರಾಮದಲ್ಲಿ. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಗ್ರೀನ್ ಹೌಸ್ ಕೊಚ್ಚಿ ಹೋಗಿದೆ. ಚಿಕ್ಕ ಮಳೂರು ಗ್ರಾಮದ ನಿವಾಸಿಯಾದ ಸುಮಿತ್ರಮ್ಮ ಎಂಬುವರಿಗೆ ಈ ಗ್ರೀನ್ ಹೌಸ್ ಸೇರಿದೆ.
ಈ ಗ್ರೀನ್ ಹೌಸ್ ನಲ್ಲಿ ವಿವಿಧ ತರಕಾರಿ, ಸೊಪ್ಪು ಮತ್ತು ಹೂವುಗಳನ್ನು ಬೆಳೆಸಿದ್ದರು. ನಿನ್ನೆ ರಾತ್ರಿ ಸುರಿದ ಗುಡುಗು ಸಹಿತ ಗಾಳಿ ಮಳೆಗೆ ಗ್ರೀನ್ ಹೌಸ್ ಸಂಪೂರ್ಣವಾಗಿ ನೆಲಕಚ್ಚಿದೆ. ಗ್ರೀನ್ ಹೌಸ್ ನೆಲಕಚ್ಚಿದ ಹಿನ್ನಲೆಯಲ್ಲಿ ಸುಮಾರು ಲಕ್ಷಾಂತರ ರೂ ಬೆಳೆಗಳು ಹಾನಿಯಾಗಿ ನಷ್ಟವಾಗಿದೆ. ಬೆಳೆ ನಷ್ಟದ ಕುರಿತು ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ.
ಬಿರುಗಾಳಿಗೆ ನೆಲಕ್ಕೆ ಉರುಳಿಬಿದ್ದ ಗ್ರಾಮದ ವಿದ್ಯುತ್ ಕಂಬಗಳು
ತಡ ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬಗಳು, ಮರಗಳು ಬಿರುಗಾಳಿಗೆ ಸಿಲುಕಿ ನೆಲಕ್ಕೆ ಉರುಳಿದೆ . ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ಎಂಬ ತಾಂಡದಲ್ಲಿ ಈ ಘಟನೆ ನಡಿದಿದೆ.
ಬಿರುಗಾಳಿಯಿಂದಾಗಿ ನೆಲಕ್ಕೆ ಉರುಳಿಬಿದ್ದ ವಿದ್ಯುತ್ ಕಂಬಗಳ ಜೊತೆಗೆ ಮರಗಳು ಸಹ ಉರುಳಿ ಬಿದ್ದಿವೆ. ಗ್ರಾಮದಲ್ಲಿ ಮೂರ್ನಾಲ್ಕು ಮನೆಗಳ ಮೇಲೆ ವಿದ್ಯುತ್ ಕಂಬಗಳು ಬಿದ್ದ ಪರಿಣಾಮದಿಂದ ಮನೆಗಳಿಗೆ ಹಾನಿಯಾಗಿದೆ . ಬಿರುಗಾಳಿ ಸಮೇತ ಬಂದ ಮಳೆಯಾಂದಾಗಿ ಜನರು ಬೆಚ್ಚಿದ್ದಾರೆ. ಇದನ್ನು ಓದಿ:-ವಿಜಯನಗರದಲ್ಲಿ ರೈತರಿಗೆ ಕರಡಿಗಳ ಕಾಟ – ಕಂಗಲಾದ ಅನ್ನದಾತ