ಹರಿಪ್ರಿಯಾ- ವಸಿಷ್ಠ ಸಿಂಹ ಎಂಗೇಜ್ ಮೆಂಟ್ ಪೋಟೋ ಔಟ್

ಸ್ಯಾಂಡಲ್ ವುಡ್ ( SANDALWOOD ) ನಟಿ ಹರಿಪ್ರಿಯಾ ( HARIPRIYA ) ಮತ್ತು ವಸಿಷ್ಠ ಸಿಂಹ ಜೋಡಿ ಆಪ್ತರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ( SANDALWOOD ) ನಟಿ ಹರಿಪ್ರಿಯಾ ( HARIPRIYA ) ಮತ್ತು ವಸಿಷ್ಠ ಸಿಂಹ ಜೋಡಿ ಆಪ್ತರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇಬ್ಬರು ಕ್ರಿಯೇಟಿವ್ ಪೋಸ್ಟ್ ಮೂಲಕ ತಮ್ಮ ಪ್ರೀತಿಯ ವಿಷ್ಯ ತಿಳಿಸಿದ್ದರು. ಇದೀಗ ಎಂಗೇಜ್ಮೆಂಟ್ ಫೋಟೋಗಳು ಹೊರಬಿದ್ದಿದೆ. ನಟಿ ಹರಿಪ್ರಿಯಾ ಸಿಂಹದ ಕೈಮೇಲೆ ಮಗುವೊಂದು ಮಲಗಿರುವ ಫೋಟೋ ಹಂಚಿಕೊಂಡು, “ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು..!!” ಎಂದು ಅಡಿಬರಹ ನೀಡಿದ್ದರು.

 

View this post on Instagram

 

A post shared by Hariprriya (@iamhariprriya)

ಆಗಲೇ ಅಭಿಮಾನಿಗಳು ಆ ಸಿಂಹ ಮತ್ಯಾರು ಅಲ್ಲ, ವಸಿಷ್ಠ ಸಿಂಹ ಎಂದು ಊಹಿಸಿದ್ದರು. ಈಗ ಈ ವಿಷಯ ಖಚಿತವಾಗಿದೆ. ಹರಿಪ್ರಿಯಾ, ವಸಿಷ್ಠ ನಿಶ್ಚಿತಾರ್ಥದ ಫೋಟೋ ಹೊರಬಿದ್ದಿದೆ. ಹರಿಪ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋವನ್ನೇ ವಸಿಷ್ಠ ಸಿಂಹ ಕೂಡ ಹಂಚಿಕೊಂಡು, “ಎಂದೂ ನಿನ್ನ ನೆರಳಾಗಿ ಕಾಯುವೆ ನಾನು..!!” ಎಂದು ಕ್ಯಾಪ್ಶನ್ ನೀಡಿದ್ದಾರೆ.   ಇದನ್ನೂ ಓದಿ : – ಮತ್ತೆ ಯೂಟ್ಯೂಬ್ ಗೆ ಮರಳಿದ ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡು

 

View this post on Instagram

 

A post shared by Vasishta N Simha (@imsimhaa)

ವಸಿಷ್ಠ ಸಿಂಹ ( VASISTA SIMHA ) ಹರಿಪ್ರಿಯಾ ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಈ ಜೋಡಿಗೆ ಕೆಲವರು ಸಿಂಹಪ್ರಿಯ ಎಂದು ಹೆಸರಿಟ್ಟಿದ್ದಾರೆ. ಹರಿಪ್ರಿಯ ನಿವಾಸದಲ್ಲಿ ನಿನ್ನೆ ನಿಶ್ಚಿತಾರ್ಥ ನಡೆದಿದೆ. ಕುಟುಂಬಸ್ಥರು, ಸ್ನೇಹಿತರು ಮಾತ್ರ ಈ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದಾರೆ.

ಊರು ತುಂಬೆಲ್ಲ ಸುದ್ದಿಯಾದರೂ ಕೂಡ ಇವರಿಬ್ಬರು ಬಾಯಿಬಿಟ್ಟು ಈ ವಿಷಯವನ್ನು ಹೇಳದೆ, ಕ್ರಿಯೇಟಿವಿಟಿ ಮೂಲಕ ಇನ್ನೂ ಕೂಡ ಕುತೂಹಲವನ್ನು ಉಳಿಸಿಕೊಂಡು ಪ್ರೀತಿ ವಿಷಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : –  ತಾಕತ್ ಇದ್ರೆ ನನ್ನ ಎದುರು ಹಸು ತಿನ್ನಿ – ಸಿದ್ದರಾಮಯ್ಯ, ಖರ್ಗೆಗೆ ಪ್ರಭು ಚೌಹಾಣ್ ಸವಾಲು

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!