ಭವಾನಿ ರೇವಣ್ಣ (BHAVANI REVANNA ) ಅವರನ್ನು ಪಕ್ಷಕ್ಕೆ ಆಹ್ವಾನ ಮಾಡಿದ್ದು ತಮಾಷೆಗೆ.ಅದನ್ನೇ ಗಂಭೀರವಾಗಿ ಪರಿಗಣಿಸಬಾರದು. ನಾನು ತಮಾಷೆಗೆ ಹೇಳಿದ್ದು ಎಂದು ಬೆಂಗಳೂರಿನಲ್ಲಿ ಸಿ.ಟಿ ರವಿ (C.T RAVI) ಹೇಳಿದ್ದಾರೆ.
ನನ್ನ ಬಗ್ಗೆ ಆಕ್ರೋಶ ಭಾವನೆ ಬೇಡ. ನಾನು ಜೆಡಿಎಸ್ ಹೈಕಮಾಂಡ್ ಅಲ್ಲ. ಅವರ ಹೈಕಮಾಂಡ್ ಅವರ ಮನೆಯಲ್ಲೇ ಇದೆ. ಅವರದ್ದು ಮನೆ ಜಗಳ ಅಂತ ನಾನು ಹೇಳಿದ್ರೆ ತಪ್ಪಾಗುತ್ತೆ. ಹಾಸನದಲ್ಲಿ ಪ್ರೀತಂ ಕಡಿಮೆ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಪ್ರೀತಂ ಜನಪ್ರಿಯತೆ ಇತ್ತೀಚೆಗೆ ಹೆಚ್ಚಾಗಿದೆ. ಜನರ ಬೆಂಬಲ ಪ್ರೀತಂ ಪರ ಇದೆ. ಜೆಡಿಎಸ್ ನಿಂದ ಯಾರೇ ಅಭ್ಯರ್ಥಿ ಆದರೂ ಪ್ರೀತಂ ಗೆಲ್ಲೋದು ನಿಶ್ಚಿತ. ಭವಾನಿ ಅಕ್ಕ ಅವರಿಗೆ ಹಾಸನ ಸುರಕ್ಷಿತ ಕ್ಷೇತ್ರ ಅಲ್ಲ ಎಂದು ತಿಳಿಸಿದ್ರು. ಇದನ್ನು ಓದಿ :- ಬಿವಿಬಿ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ – ಅಮಿತ್ ಶಾ
ಅಶೋಕ್ ವಿರುದ್ಧ ಕಾರ್ಯಕರ್ತರ ಆಕ್ರೋಶ ವಿಚಾರ
ಅಶೋಕ್ ನಮ್ಮ ಪಕ್ಷದ ಹಿರಿಯ ನಾಯಕ.ಯಾರೋ ವಿರೋಧಿಸ್ತಾರೆ ಅಂದ್ರೆ ಅದು ಗಂಭೀರವಾಗಿ ಪರಿಗಣಿಸೋದು ಬೇಡ. ನಮಗೆ ಯಾವ ಒಳ ಒಪ್ಪಂದವೂ ಯಾರ ಜತೆಗೂ ಇಲ್ಲ ಎಂದು ಹೇಳಿದ್ರು.
ರಮೇಶ್ ಜಾರಕಿಹೊಳಿ, ಇತರರ ಮನಸ್ತಾಪ ವಿಚಾರ
2006ರವರೆಗೆ ನಮ್ಮ ಪಕ್ಷ ನೀತಿಯನ್ನೇ ಅಳವಡಿಸಿಕೊಂಡಿತ್ತು.ನಂತರ ಜಾತಿ ಪ್ರಭಾವ ಬೀರಿತ್ತು. ಬಳಿಕ ಉಪ ಜಾತಿ ಪ್ರಭಾವ ಬೀರತೊಡಗಿತು.ನಂತರ ವ್ಯಕ್ತಿ ಪ್ರಭಾವ ಆಗಿತ್ತು.ಕೆಲವರು ಪಕ್ಷಕ್ಕೆ ಬರುವಾಗಲೇ ನೀತಿಗೆ ಬೌಲ್ಡ್ ಆಗಿ ಬರ್ತಾರೆ. ಇನ್ನು ಕೆಲವರನ್ನ ಬಂದ ಬಳಿಕ ಮೋಲ್ಡ್ ಮಾಡಬೇಕು. ಅವರಿಗೆ ವಿಚಾರದಾರೆ ತುಂಬಿ ಕಲ್ಟ್ ಮಾಡಬೇಕು.ಕೆಲವರು ಬೇಗ ಆಗ್ತಾರೆ. ಕೆಲವರು ನಿಧಾನವಾಗಿ ಆಗ್ತಾರೆ.ಒಟ್ಟಿನಲ್ಲಿ ನಮ್ಮ ನೀತಿಗೆ ಬರುವಂತೆ ಮಾಡ್ತೀವಿ ಎಂದು ತಿಳಿಸಿದ್ರು.
ಇದನ್ನು ಓದಿ :- ಸಿದ್ದರಾಮಯ್ಯಗೆ ತಾಕತ್ ಇದ್ರೆ ಸ್ವಂತ ಪಕ್ಷ ಕಟ್ಟಿ ಬರೀ 5 ಸೀಟು ಗೆಲ್ಲಲಿ – ಹೆಚ್.ಡಿ. ಕೆ