ದೇಶದ ಅತಿ ದೊಡ್ಡ ಹೌಸಿಂಗ್ ಫೈನಾನ್ಸ್ ಕಂಪನಿ ಎಚ್.ಡಿ.ಎಫ್.ಸಿ (HDFC) ಲಿಮಿಟೆಡ್, ಅತಿ ದೊಡ್ಡ ಖಾಸಗಿ ಬ್ಯಾಂಕ್ ‘ಎಚ್ಡಿಎಫ್ಸಿ ಬ್ಯಾಂಕ್’ನಲ್ಲಿ ವಿಲೀನವಾಗುತ್ತಿರುವ ವಿಚಾರ ಷೇರುಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಸೆನ್ಸೆಕ್ಸ್ ದಿನದಂತ್ಯಕ್ಕೆ 1300 ಅಂಕಗಳ ಏರಿಕೆ ಕಂಡಿದೆ.
ಕಾರ್ಪೊರೇಟ್ ಇತಿಹಾಸದಲ್ಲಿ ಅತಿದೊಡ್ಡ ವಿಲೀನ ಇದಾಗಿದ್ದು, ಭಾರತದ ಅತಿದೊಡ್ಡ ಹೌಸಿಂಗ್ ಫೈನಾನ್ಸ್ ಕಂಪನಿ (HDFC) ಲಿಮಿಟೆಡ್, ದೇಶದ ಅತಿದೊಡ್ಡ ಖಾಸಗಿ ಸಾಲದಾತ (HDFC )ಬ್ಯಾಂಕ್ನೊಂದಿಗೆ ವಿಲೀನಗೊಳ್ಳಲಿದೆ. ಎಚ್.ಡಿ.ಎಫ್.ಸಿ ಲಿಮಿಟೆಡ್ ಎಚ್.ಡಿ.ಎಫ್.ಸಿ ಬ್ಯಾಂಕ್‘ನಲ್ಲಿ ವಿಲೀನವಾಗುತ್ತಿರುವ ಕುರಿತು ಪ್ರಕಟಣೆ ಹೊರ ಬೀಳುತ್ತಿದ್ದಂತೆ ಎಚ್.ಡಿ.ಎಫ್.ಸಿ ಲಿಮಿಟೆಡ್ ಮತ್ತು ಎಚ್.ಡಿ.ಎಫ್.ಸಿ ಬ್ಯಾಂಕ್ ಎರಡರ ಷೇರು ಬೆಲೆ ಶೇಕಡ 10ರಷ್ಟು ಏರಿಕೆ ದಾಖಲಿಸಿದೆ.
ಇದನ್ನು ಓದಿ :- BREAKING NEWS – ಬೇಸಿಗೆ ಶುರುವಾಗುತ್ತಿದ್ದಂತೆ ರಾಜ್ಯದ ಜನರಿಗೆ ಬಿಗ್ ಶಾಕ್- ವಿದ್ಯುತ್ ದರ ಏರಿಕೆ ಮಾಡಿದ KERC
ಎಚ್.ಡಿ.ಎಫ್.ಸಿ ಲಿಮಿಟೆಡ್ ಪ್ರತಿ ಷೇರು ಬೆಲೆ 2,636ರೂ ಹಾಗೂ ಎಚ್.ಡಿ.ಎಫ್.ಸಿ ಬ್ಯಾಂಕ್ ಷೇರು ಬೆಲೆ 1,630ರೂಗೆ ತಲುಪಿದೆ. ವಿಲೀನ ಪ್ರಕ್ರಿಯ ಬಳಿಕ 25 ಎಚ್.ಡಿ.ಎಫ್.ಸಿ ಲಿಮಿಟೆಡ್ ಷೇರುಗಳನ್ನು ಹೊಂದಿರುವ ಹೂಡಿಕೆದಾರರಿಗೆ ಎಚ್.ಡಿ.ಎಫ್.ಸಿ ಬ್ಯಾಂಕ್ನ 42 ಷೇರುಗಳು ಜಮೆಯಾಗಲಿವೆ.
ಪ್ರಸ್ತುತ ಎಚ್.ಡಿ.ಎಫ್.ಸಿ ಲಿಮಿಟೆಡ್ನ ಒಟ್ಟು ಆಸ್ತಿ ಮೌಲ್ಯ 6.23ರೂ ಲಕ್ಷ ಕೋಟಿ. ಎಚ್.ಡಿ.ಎಫ್.ಸಿ ಬ್ಯಾಂಕ್ನ ಆಸ್ತಿ ಮೌಲ್ಯ 19.38 ಲಕ್ಷ ರೂ ಕೋಟಿ ಇದೆ. ಎಚ್.ಡಿ.ಎಫ್.ಸಿ ಬ್ಯಾಂಕ್ 3,000ಕ್ಕೂ ಹೆಚ್ಚು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಟ್ಟು 6,342 ಶಾಖೆಗಳನ್ನು ಹೊಂದಿದ್ದು, 6.8 ಕೋಟಿ ಗ್ರಾಹಕರನ್ನು ಒಳಗೊಂಡಿದೆ.
ಇದನ್ನು ಓದಿ :- ಪರಮೇಶ್ವರ್ ಸಿಎಂ ಆಗಲಿ ಎಂದ ಕುರುಬ ಸಮುದಾಯದ ಸ್ವಾಮೀಜಿ..!