ಹಿಜಾಬ್ ವಿವಾದದ ಕುರಿತಾಗಿ ನ್ಯಾಯಾಲಯದ ತೀರ್ಪಿಗೆ ತಲೆಬಾಗಬೇಕು ಎಂದು ಮಾಜಿ ಸಿಎಂ ಹೆಚ್ಡಿಕೆ ಮನವಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಿಜಾಬ್ ವಿಚಾರವಾಗಿ ನಿಲುವಳಿ ಸೂಚನೆ ಮಂಡನೆ ಮಾಡಿದ್ದೇನೆ. ಹೈಕೋರ್ಟ್ ತೀರ್ಪಿಗೆ ನಾವು ತಲೆಬಾಗಲೇಬೇಕು ಎಂದು ಹೇಳಿದ್ದಾರೆ. ಶಾಲೆಗೆ ಮಕ್ಕಳು ಹೋಗದೆ ಇದ್ದರೆ ಅವರಿಗೆ ನಷ್ಟವಾಗಲಿದೆ. ಈ ಕಾರಣಕ್ಕಾಗಿ ಮಕ್ಕಳು ಮತ್ತು ಪೋಷಕರು ಇದನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿದ್ದಾರೆ. ಹಿಜಾಬ್ ವಿವಾದದ ಹಿಂದೆ ಕಾಣದ ಕೈಗಳು ಇದೆ ಎಂದು ಹೈಕೋರ್ಟ್ ಹೇಳಿದೆ. ಶಿಕ್ಷಣ ಕ್ಷೇತ್ರ ದೇವಾಲಯ, ಅಲ್ಲಿ ದ್ವೇಷದ ದಳ್ಳುರಿ ಮೂಡಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷಗಳು ಮತ ಪಡೆಯಲು ಈ ರೀತಿ ಮಾಡಬಾರದು. ಹೊರಗೆ ಹೇಗೆ ಬೇಕಾದ್ರೂ ಮಾಡಲಿ. ಕಸ್ತೂರಬಾ ಅವರು ಮುಖಕ್ಕೆ ಬಟ್ಟೆ ಹಾಕಿದ್ದಾರೆ. ಶಿಕ್ಷಣ ಕೊಟ್ಟರೆ ಅವರಲ್ಲಿ ಬದಲಾವಣೆ ಬರಬಹುದು. ಪತಿ ತೀರಿಕೊಂಡ್ರೆ ಮೊದಲು ತಲೆ ಬೋಳಿಸುತ್ತಿದ್ದರು. ಈಗ ಎಲ್ಲಾ ಬದಲಾವಣೆ ಆಗಿದೆ. ಅದು ಶಿಕ್ಷಣದ ಮೂಲಕ. ಅವರಲ್ಲಿ ಬದಲಾವಣೆ ತರಬೇಕು ಆದರೆ ರಾಜಕೀಯದಲ್ಲಿ ಇದನ್ನು ಜೀವಂತವಾಗಿ ಇಡಲು ಪ್ರಯತ್ನ ಮಾಡುತ್ತಿದ್ದಾರೆ. ಮತಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.