ನಿರ್ಗಮಿತ ಹಿಮಾಚಲ ಪ್ರದೇಶ (Himachal pradesh) ಮುಖ್ಯಮಂತ್ರಿ ಜೈರಾಮ್ ನಿರ್ಗಮಿತ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ (Jairam thakur) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹಿಮಾಚಲ ವಿಧಾನಸಭೆ ಚುನಾವಣೆ (Vidhanasabha election) ಯಲ್ಲಿ ಆಡಳಿತರೂಢ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ ಜೈರಾಮ್ ಠಾಕೂರ್ ಅವರು ರಾಜಭವನ (Rajbhavan) ಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್, “ನಾನು ನನ್ನ ರಾಜೀನಾಮೆಯನ್ನು ರಾಜ್ಯಪಾಲರಿಗೆ ನೀಡಿದ್ದೇನೆ. ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ನಾವು ಸೋಲಿನ ಪರಾಮರ್ಶೆ ಮಾಡಬೇಕಾಗಿದೆ. ಕೆಲವು ವಿಚಾರಗಳು ಫಲಿತಾಂಶದ ದಿಕ್ಕನ್ನು ಬದಲಾಯಿಸಿವೆ ಎಂದು ಹೇಳಿದರು. 68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ (Election result) ಪ್ರಕಟವಾಗಿದ್ದು, ಆಡಳಿತರೂಢ ಬಿಜೆಪಿ 20 ಸ್ಥಾನ ಪಡೆದರೆ, ಪ್ರತಿಪಕ್ಷ ಕಾಂಗ್ರೆಸ್ 40 ಸ್ಥಾನಗಳಲ್ಲಿ ಗೆಲುವ ಮೂಲಕ ಐದು ವರ್ಷಗಳ ನಂತರ ಮತ್ತೆ ಅಧಿಕಾರಕ್ಕೇರಲಿದೆ.
ಇದನ್ನು ಓದಿ : – ಪರಿಷತ್ ಸಭಾಪತಿ ಚುನಾವಣೆಗೆ ದಿನಾಂಕ ನಿಗದಿ