ರಾಮದೇವರ ಬೆಟ್ಟ (Ramadevara betta) ದಲ್ಲಿ ರಾಮ ಮಂದಿರ (Ram mandir) ನಿರ್ಮಾಣ ವಿಚಾರ ಕುರಿತಂತೆ ತುಮಕೂರಿ (Tumkuru) ನ ಚಿಕ್ಕನಾಯಕನಹಳ್ಳಿ ಪಂಚರತ್ನಯಾತ್ರೆಯಲ್ಲಿ ಹೆಚ್‌ಡಿಕೆ (Kumarswamy) ಪ್ರತಿಕ್ರಿಯಿಸಿದ್ದಾರೆ. ಇವರದ್ದೆ ಸರ್ಕಾರ ಇದೆ. ಮೂರೂವರೆ ವರ್ಷದಿಂದ ಮಾಡದೆ ಇದ್ದವರು, ಈವಾಗ ಮಾಡ್ತಾರೆ…? ಈವಾಗ ದಕ್ಷಿಣ ಭಾರತದಲ್ಲಿ ರಾಮಮಂದಿರ ನಿರ್ಮಾಣ ಮಾಡ್ತಿವಿ ಎಂದು ಘೋಷಣೆ ಮಾಡ್ತಾರೆ.
ಇನ್ನು ಮೂರು ತಿಂಗಳಿಗೆ ಚುನಾವಣೆ ಬರ್ತಾ ಇದೆ. ಇವರನ್ನೆ ಜನ ಹೊರಗೆ ಇಡೋ ಪ್ರಯತ್ನ ಮಾಡ್ತಿದ್ದಾರೆ. ನಮ್ಮ ರಾಜ್ಯ ದರಿದ್ರ ರಾಜ್ಯ ಅಲ್ಲ. ಯುಪಿ ಸಿಎಂ ಕರೆತಂದು ಇಲ್ಲಿ ಫೌಂಡೇಶನ್ ಹಾಕುವ ಅವಶ್ಯಕತೆ ಇಲ್ಲ. ನಮ್ಮ ಸುತ್ತೂರು ಮಠಾಧಿಶರನ್ನು ಕರೆತಂದು, ಆದಿಚುಂಚನಗಿರಿ (Adhichunchanagiri) ಶ್ರೀಗಳನ್ನು ಕರೆತಂದು ನಾನೇ ಮಾಡುತ್ತೇನೆ. ಇವರೇನು ನನ್ನ ಕ್ಷೇತ್ರಕ್ಕೆ ಬಂದು ಮಾಡೋದು ಬೇಕಾಗಿಲ್ಲ. ಒಕ್ಕಲಿಗ ಸ್ವಾಮೀಜಿಗಳನ್ನು ಕರೆತಂದು ನಾನೇ ಮಂದಿರ ನಿರ್ಮಾಣ ಮಾಡಿಸುತ್ತೇನೆ ಎಂದು ಹೆಚ್ಡಿಕೆ ತಿರುಗೇಟು ನೀಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಇವರೇನು ಬಂದು ರಾಮಮಂದಿರ ಕಟ್ಟೋದು ಬೇಕಾಗಿಲ್ಲ. ನಂಗೆ ದೇವರು ಇನ್ನು ಶಕ್ತಿ ಕೊಟ್ಟಿದ್ದಾನೆ. ಬೇರೆ ರಾಜ್ಯದಿಂದ ಯಾರನ್ನೊ ಕರೆತಂದು ಚುನಾವಣೆ ಸಮಯದಲ್ಲಿ ಇದೆಲ್ಲ ಮಾಡೋದು ಬೇಡ. ಇವರ ಆಟ ಮುಗಿತಾ ಬಂತು, ಇದು ಇವರ ಕೊನೆಯ ಅಧ್ಯಾಯ. ಐದು ವರ್ಷ ಸರ್ಕಾರ ಇದ್ದಾಗ ಮಾಡಬಹುದಿತ್ತು. ಇದನ್ನು ಓದಿ : – ಸಿಎಂ ಬೊಮ್ಮಾಯಿ ಪ್ರತಿಮೆಗೆ ರಕ್ತಾಭಿಷೇಕ, ತೀವ್ರ ಸ್ವರೂಪಕ್ಕೆ ತಿರುಗಿದ ರೈತರ ಹೋರಾಟ
ಜನರ ಹಣ ಲೂಟಿ ಹೊಡೆದು ಅದರಿಂದ ಮಂದಿರ ನಿರ್ಮಾಣ ಮಾಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ರಾಮನಗರ (Ramanagara) ದಲ್ಲಿ ಬಿಜೆಪಿಯ ಆಟ ನಡಿಯಲ್ಲ. ಇಲ್ಲಿ ನಮ್ಮ ಜನರ ಸಂಬಂಧ ಹೇಗಿದೆ ಗೊತ್ತಾ ? ತಾಯಿ ಮಕ್ಕಳ ಸಂಬಂಧ ಇದ್ದ ಹಾಗೆ ಇದೆ. ನಾನು ಯಾವುದೇ ವಿರೋಧ ಮಾಡಲ್ಲ, ಕಟ್ಟ ಬೇಕು ಅಂದ್ರೆ ನಾನೆ ಕಟ್ಟುತ್ತೇನೆ ಚುನಾವಣೆ ಹತ್ತಿರ ಬಂದಾಗ ಇವರ ಆಟ ಏನು ನಡಿಯೊಲ್ಲ. ಜನ ಇವರಿಗೆ ಚುನಾವಣೆಯಲ್ಲಿ ಉತ್ತರ ಕೊಡ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಇದನ್ನು ಓದಿ : – ಮಹಾ ವಿಧಾನಸಭೆಯಲ್ಲಿ ಲೋಕಾಯುಕ್ತ ಮಸೂದೆ ಅಂಗೀಕಾರ – ಸಿಎಂ, ಸಚಿವರೂ ಒಂಬುಡ್ಸ್ ಮನ್ ವ್ಯಾಪ್ತಿಗೆ