ಕೊರೊನಾ ಸೋಂಕು ಹರಡದೇ ಇರಲು ಬೆಳಗಾವಿ ಶಾಸಕರು ಬೀದಿಗಳಲ್ಲಿ ಹೋಮ ಹವನ ಮಾಡಿಸಿ ಸುದ್ದಿ ಮಾಡಿದ್ದಾರೆ.
ಬೆಳಗಾವಿ ಶಾಸಕ ಅಭಯ ಪಾಟೀಲ ಬೆಳಗಾವಿಯ ಬೀದಿಗಳಲ್ಲಿ ಹೋಮ ಹವನ ಮಾಡಿಸಿದ್ದು, ಮನೆಯ ಮುಂದೆ ಅಗ್ನಿ ಕುಂಡ ನಿರ್ಮಿಸಿ ಹೋಮಕ್ಕೆ ಚಾಲನೆ ನೀಡಿದರು.
ಪುರಾತನ ಕಾಲದಿಂದಲೂ ಹೋಮ-ಹವನ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಹೋಮ-ಹವನ ಮಾಡುವುದರಿಂದ ಕೊರೊನಾ ಹೋಗುತ್ತದೆಯೇ ಎಂಬ ಪ್ರಶ್ನೆಗೆ ವಾತಾವರಣ ಶುದ್ದಿಯಾಗಲು ಹೀಗೆ ಮಾಡುತ್ತಿರುವುದಾಗಿ ಅವರು ಹೇಳಿದರು.