ಬೆಂಗಳೂರು: ಆನ್ ಲೈನ್ ಹನಿಟ್ರ್ಯಾಪ್ ಗೆ ಯುವಕನೊಬ್ಬ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ ಆರ್ ಪುರ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಭರತ್ ಪುರ್ ಜಿಲ್ಲೆಯ ಜಾವೆದ್ ಮತ್ತು ರುಬಿನ್ ಎಂಬುವರನ್ನು ಬಂಧಿಸಿದ್ದಾರೆ. ಕಳೆದ ತಿಂಗಳ 23 ರಂದು ಕೆ ಆರ್ ಪುರ ಬಳಿಯ ಬಟ್ರಹಳ್ಳಿಯ ಮನೆಯಲ್ಲಿ ಅವಿನಾಶ್ ಅತ್ಮಹತ್ಯೆ ಮಾಡಿಕೊಂಡಿದ್ದ.
ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸ್ ಮಾಡಿಕೊಂಡಿದ್ದ ಅವಿನಾಶ್, ಬಂಧಿತ ಆರೋಪಿಗಳು ನೇಹ ಶರ್ಮ ಎಂಬ ಅಕೌಂಟ್ ನಿಂದ ಚಾಟ್ ಮಾಡಿದ್ದರು, ಯುವಕನ ಜೊತೆ ನೈಟ್ ಚಾಟಿಂಗ್ ನಲ್ಲಿ ಫೋನೊ ರೊಮ್ಯಾನ್ಸ್ ಮಾಡಿದ್ದರು. ಅಷ್ಟೇ ಅಲ್ಲ ಯುವಕನಿಗೆ ತನ್ನ ನಗ್ನ ದೇಹವನ್ನು ತೋರಿಸುವಂತೆ ಹೇಳಿದ್ದರು. ಆ ಕಡೆಯಿಂದಲೂ ಯುವತಿ ತನ್ನ ದೇಹ ತೋರಿಸುವುದಾಗಿ ನಂಬಿಸಿದ್ದಳು.
ನಂತರ ಯುವಕನ ನಗ್ನ ದೇಹವನ್ನು ವಿಡಿಯೋ ಕಾಲ್ ಮೂಲಕ ತೋರಿಸಿದ್ದ. ಈ ವೇಳೆ ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ ಅರೋಪಿಗಳು, ಕಾಲ್ ರೆಕಾರ್ಡ್ ಮಾಡಿ ಯುವಕನಿಗೆ ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದರು.
ಹಣ ನೀಡಬೇಕು ಇಲ್ಲವಾದ್ರೆ ನಿನ್ನ ಕುಟುಂಬದ ಎಲ್ಲರಿಗೂ ವಿಡಿಯೋ ಕಳಿಸುವ ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದ ಅವಿನಾಶ್ ಅತ್ಮಹತ್ಯೆಗೆ ಶರಣಾಗಿದ್ದ. ಮೃತ ಅವಿನಾಶ್ ಸಹೋದರಿ ಕೊಟ್ಟ ದೂರಿನ ಆಧಾರದ ಮೇಲೆ ಇಬ್ಬರೂ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.