ಬಿಜೆಪಿ (BJP)ಯ ಎಲ್ಲಾ ಸಚಿವರೂ ವೇಶ್ಯಾವಾಟಿಕೆ ದಂಧೆ, ವರ್ಗಾವಣೆ ದಂಧೆಯ ಸ್ಯಾಂಟ್ರೋ ರವಿ (SANTRO RAVI) ಯೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಆರೋಪಿಸಿದೆ.
ಬಿಜೆಪಿಯ ಎಲ್ಲಾ ಸಚಿವರೂ ವೇಶ್ಯಾವಾಟಿಕೆ ದಂಧೆ, ವರ್ಗಾವಣೆ ದಂಧೆಯ ಸ್ಯಾಂಟ್ರೋ ರವಿಯೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿದ್ದಾರೆ.
ಶಿಕ್ಷಣ ಸಚಿವ @BCNagesh_bjp ಅವರೂ ಆತನ ದಂಧೆಯ ಫಲಾನುಭವಿಯೇ?@BJP4Karnataka ಸರ್ಕಾರವನ್ನು ಪಿಂಪ್ಗಳು ನಿಯಂತ್ರಿಸುತ್ತಿದ್ದಾರೆಯೇ?
ಕಮಿಷನ್ ಸರ್ಕಾರಕ್ಕೆ ಇನ್ನೆಷ್ಟು ಬ್ರೋಕರ್ಗಳಿದ್ದಾರೆ? pic.twitter.com/f8jf4Va3AQ
— Karnataka Congress (@INCKarnataka) January 6, 2023
ಶಿಕ್ಷಣ ಸಚಿವ ಬಿಸಿ ನಾಗೇಶ್( B.C NAGESH) ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಜೊತೆಗೆ ಸ್ಯಾಂಟ್ರೋ ರವಿ ಇರುವ ಫೋಟೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ಶಿಕ್ಷಣ ಸಚಿವರು ದಂಧೆಯ ಫಲಾನುಭವಿಯೇ? ಬಿಜೆಪಿ ಸರ್ಕಾರವನ್ನು ಪಿಂಪ್ ಗಳು ನಿಯಂತ್ರಿಸುತ್ತಿದ್ದಾರೆಯೇ? ಕಮಿಷನ್ ಸರ್ಕಾರಕ್ಕೆ ಇನ್ನೆಷ್ಟು ಬ್ರೋಕರ್ ಗಳಿದ್ದಾರೆ? ಎಂದು ಪ್ರಶ್ನಿಸಿದೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಿಡಿಗೆ ತಡೆಯಾಜ್ಞೆ ತಂದಿರುವುದಕ್ಕೂ, ಈತನಿಗೆ ಸಚಿವರೊಂದಿಗಿರುವ ಆಪ್ತತೆಗೂ, ಈತನ ದಂಧೆಗೂ ಸಂಬಂಧವಿದೆಯೇ? ಎಂದು ಕೇಳಲಾಗಿದೆ.
ಸರ್ಕಾರಿ ಅತಿಥಿ ಗೃಹವಾದ ಕುಮಾರಕೃಪವೇ ಸ್ಯಾಂಟ್ರೋ ರವಿಯ ಹೆಡ್ಡಾಫೀಸ್ ಆಗಿದ್ದು ಹೇಗೆ?
ಯಾರ ಕೃಪೆಯಿಂದ ಆತನಿಗೆ ಕುಮಾರಕೃಪ ಸಿಕ್ಕಿದ್ದು?
ಬೊಮ್ಮಾಯಿ ಕೃಪೆಯೇ?
ಜ್ಞಾನೇಂದ್ರ ಕೃಪೆಯೇ?— Karnataka Congress (@INCKarnataka) January 6, 2023
ಸ್ಯಾಂಟ್ರೋ ರವಿಯನ್ನು ಸಿಎಂ ಬೊಮ್ಮಾಯಿ ಕೂಡಾ ಸಾರ್ ಎಂದು ಸಂಬೋಧಿಸುವುದಿಲ್ಲವೇ? ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಸರ್ಕಾರಿ ಅತಿಥಿ ಗೃಹವಾದ ಕುಮಾರಕೃಪವೇ ಸ್ಯಾಂಟ್ರೋ ರವಿಯ ಹೆಡ್ಡಾಫೀಸ್ ಆಗಿದ್ದು ಹೇಗೆ? ಯಾರ ಕೃಪೆಯಿಂದ ಆತನಿಗೆ ಕುಮಾರಕೃಪ ಸಿಕ್ಕಿದ್ದು? ಬೊಮ್ಮಾಯಿ ಕೃಪೆಯೇ? ಜ್ಞಾನೇಂದ್ರ ಕೃಪೆಯೇ? ಎಂದು ಪ್ರಶ್ನಿಸಿದೆ.
ಕೋಟ್ಯಂತರ ರೂಪಾಯಿಯ ಕಂತೆ ಕಂತೆ ನೋಟುಗಳೊಂದಿಗೆ ಪೋಸ್ ಕೊಡ್ತಿರುವ ಸ್ಯಾಂಟ್ರೋ ರವಿಯ ಮಾಹಿತಿ ಇನ್ನೂ ಐಟಿ, ಇಡಿ ಕಚೇರಿಗಳಿಗೆ ತಲುಪಿಲ್ಲವೇ?
ಈ ಅಕ್ರಮ ಹಣದ ಮೂಲ ಹುಡುಕುವುದು ಇಡಿಗೆ ಇಷ್ಟವಿಲ್ಲವೇ ಅಥವಾ @BJP4Karnataka ಸರ್ಕಾರದ ಬುಡಕ್ಕೆ ಬರುವ ಸಂಗತಿಯನ್ನು ಮುಟ್ಟದಂತೆ ಯಜಮಾನರ ಆಜ್ಞೆಯಾಗಿದೆಯೇ?
ಇಡಿ ದಾಳಿ ಯಾವಾಗ @BJP4Karnataka? pic.twitter.com/LUgxMnqiAD
— Karnataka Congress (@INCKarnataka) January 6, 2023
ಕೋಟ್ಯಂತರ ರೂಪಾಯಿಯ ಕಂತೆ ಕಂತೆ ನೋಟುಗಳೊಂದಿಗೆ ಪೋಸ್ ಕೊಡ್ತಿರುವ ಸ್ಯಾಂಟ್ರೋ ರವಿಯ ಮಾಹಿತಿ ಇನ್ನೂ ಐಟಿ, ಇಡಿ ಕಚೇರಿಗಳಿಗೆ ತಲುಪಿಲ್ಲವೇ? ಈ ಅಕ್ರಮ ಹಣದ ಮೂಲ ಹುಡುಕುವುದು ಇಡಿಗೆ ಇಷ್ಟವಿಲ್ಲವೇ ಅಥವಾ @BJP4Karnataka ಸರ್ಕಾರದ ಬುಡಕ್ಕೆ ಬರುವ ಸಂಗತಿಯನ್ನು ಮುಟ್ಟದಂತೆ ಯಜಮಾನರ ಆಜ್ಞೆಯಾಗಿದೆಯೇ? ಇಡಿ ದಾಳಿ ಯಾವಾಗ @BJP4Karnataka..? ಇದನ್ನು ಓದಿ :- ಕುಮಾರಸ್ವಾಮಿ ಪಾರ್ಟಿ ಫಾರ್ ದಿ ಫ್ಯಾಮಿಲಿ, ಆಫ್ ದಿ ಫ್ಯಾಮಿಲಿ, ಬೈದಿ ಫ್ಯಾಮಲಿ ತರ – ಪ್ರಹ್ಲಾದ್ ಜೋಶಿ
ವೇಶ್ಯಾವಾಟಿಕೆ ದಂಧೆಯ ಸ್ಯಾಂಟ್ರೋ ರವಿ ಜೊತೆಗೆ ಸಾಲು ಸಾಲು ಬಿಜೆಪಿ ಸಚಿವರು ಆಪ್ತರಾಗಿರುವುದು ಹೇಗೆ?
ಸಚಿವರು ಸಿಡಿಗೆ ತಡೆಯಾಜ್ಞೆ ತಂದಿರುವುದಕ್ಕೂ, ಈತನಿಗೆ ಸಚಿವರೊಂದಿಗಿರುವ ಆಪ್ತತೆಗೂ, ಈತನ ದಂಧೆಗೂ ಸಂಬಂಧವಿದೆಯೇ @BJP4Karnataka?@mla_sudhakar ಅವರೇ, ತಮ್ಮ ಸಿಡಿ ತಡೆಯಾಜ್ಞೆಯ ಹಿಂದಿನ ರಹಸ್ಯ ಸ್ಯಾಂಟ್ರೋ ರವಿ ಬಳಿ ಇದೆಯೇ? pic.twitter.com/xUYQB2EwZ1
— Karnataka Congress (@INCKarnataka) January 6, 2023
ಹಲವು ಆಘಾತಕಾರಿ ಸಂಗತಿಗಳು ಹೊರಬಂದ ಮೇಲೂ ಪತ್ನಿಯ ದೂರಿನ ಹೊರತಾಗಿ ಸ್ಯಾಂಟ್ರೋ ರವಿಯ ಮೇಲೆ ಬೇರೆ ಯಾವುದೇ ಪ್ರಕರಣ ದಾಖಲಿಸಿ ತನಿಖೆಗೆ ಮುಂದಾಗಲಿಲ್ಲ ಸರ್ಕಾರ. ಸರ್ಕಾರ ‘ಸಾಚಾ’ ಆಗಿದ್ದರೆ ಆತನ ವಿರುದ್ಧ ಅಕ್ರಮ ವರ್ಗಾವಣೆ ದಂಧೆಯ ಕುರಿತು ತನಿಖೆ ಮಾಡುತ್ತಿಲ್ಲವೇಕೆ? ಪಿಂಪ್ ಗಳು ಆಡಿಸಿದಂತೆ ಆಡಿಸುವ #PuppetCM ಆಗಿದ್ದಾರೆಯೇ @BSBommai ?
ಪೊಲೀಸ್ ಅಧಿಕಾರಿಗಳೆಲ್ಲ ನನ್ನ ಕೈಯ್ಯೊಳಗಿದ್ದಾರೆ ಎನ್ನುತ್ತಾನೆ ಸ್ಯಾಂಟ್ರೋ ರವಿ.
ತನಿಖೆಗೆ ಕರೆದ ಪೊಲೀಸರಿಗೇ ಆವಾಜ್ ಹಾಕುತ್ತಾನೆ.
ವರ್ಗಾವಣೆ ಮಾಡಿಸುವುದು ನನಗೆ ಲೀಲಾಜಾಲ ಎನ್ನುತ್ತಾನೆ.
ಗೃಹಸಚಿವರೇ ಅವನ ಈ ಆತ್ಮವಿಶ್ವಾಸದ ಹಿಂದಿನ ಶಕ್ತಿಯಾಗಿದ್ದಾರಾ?
ವೇಶ್ಯಾವಟಿಕೆಯ ಪಿಂಪ್ನೊಂದಿಗೆ @JnanendraAraga ಅವರದ್ದೇನು ನೆಂಟಸ್ತಿಕೆ? pic.twitter.com/SxalNJdQv6
— Karnataka Congress (@INCKarnataka) January 6, 2023
ಪೊಲೀಸ್ ಅಧಿಕಾರಿಗಳೆಲ್ಲ ನನ್ನ ಕೈಯ್ಯೊಳಗಿದ್ದಾರೆ ಎನ್ನುತ್ತಾನೆ ಸ್ಯಾಂಟ್ರೋ ರವಿ. ತನಿಖೆಗೆ ಕರೆದ ಪೊಲೀಸರಿಗೇ ಆವಾಜ್ ಹಾಕುತ್ತಾನೆ. ವರ್ಗಾವಣೆ ಮಾಡಿಸುವುದು ನನಗೆ ಲೀಲಾಜಾಲ ಎನ್ನುತ್ತಾನೆ. ಗೃಹಸಚಿವರೇ ಅವನ ಈ ಆತ್ಮವಿಶ್ವಾಸದ ಹಿಂದಿನ ಶಕ್ತಿಯಾಗಿದ್ದಾರಾ? ವೇಶ್ಯಾವಟಿಕೆಯ ಪಿಂಪ್ ನೊಂದಿಗೆ @JnanendraAraga ಅವರದ್ದೇನು ನೆಂಟಸ್ತಿಕೆ? ಎಂದು ಕಿಡಿಕಾರಿದೆ.
ಇದನ್ನು ಓದಿ :- ನನಗೆ ಟಗರು, ಹೌದು ಹುಲಿಯಾ ಅನ್ನೋದು ಅವಮಾನನಾ..? – ಸಿದ್ದರಾಮಯ್ಯ ಪ್ರಶ್ನೆ