ತಂದೆ ಹೆಸರಿನಲ್ಲಿ ಆಣೆ ಪ್ರಮಾಣದ ಬಗ್ಗೆ ಕೇಳ್ತಾರೆ. ಇವರು ಜೆಡಿಎಸ್ ಮುಗಿಸಲು ಹೊರಟಾಗ ನಾನು ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದೇ. ನಾನು ಎಂದು ಕೋಮುವಾದಕ್ಕೆ ಬೆಂಬಲ ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಯರಗೋಳ್ ಡ್ಯಾಂ ವೀಕ್ಷಣೆ ಬಳಿಕ ಕೋಲಾರದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ. ನನ್ನ ಕಾಲದಲ್ಲಿ ಯಾವುದೇ ಗಲಭೆಗೆ ಆಗಿಲ್ಲ, ಕೊಲೆಗಳಿಗೆ ಅವಕಾಶ ಕೊಟ್ಟಿಲ್ಲ. ಸಿದ್ದರಾಮಯ್ಯ 5 ವರ್ಷ ಇದ್ದಾಗ ಎಷ್ಟು ಮರ್ಡರ್ ಗಳು ಆಯ್ತು ? ರಾಜಕೀಯವಾಗಿ ಎಷ್ಟು ಕೊಲೆಗಳು ಆಯ್ತು ? ವಾಜಪೇಯಿ ಸರ್ಕಾರದಲ್ಲಿ ಮಮತಾ ಬ್ಯಾನರ್ಜಿ ಮಂತ್ರಿ ಆಗಿರಲಿಲ್ವಾ ? ಇದನ್ನೂ ಓದಿ :- PSI ನೇಮಕಾತಿ ಪರೀಕ್ಷೆಗೆ ಬ್ಲೂಟೂತ್ ಮೂಲಕ ಉತ್ತರ
DMK ಅವರ ಜೊತೆ ಸರ್ಕಾರ ಮಾಡಿಲ್ವಾ ? ಆಗಂತ ನಮ್ಮ ಜಾತ್ಯತೀತ ತತ್ವವನ್ನು ಯಾರಿಗೂ ಮಾರಾಟ ಮಾಡಿಲ್ಲ. ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಹೊರಟಿದ್ದಾರೆ ಅದು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ರು.
ಇದನ್ನೂ ಓದಿ :- ತಜ್ಞರು ಈಗಾಗಲೇ ವೈರಸ್ ಯಾವ ಮಾದರಿ ಇದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ – ಬೊಮ್ಮಾಯಿ