ಗೂಗಲ್ ಮೀಟ್, ಫೇಸ್ ಬುಕ್ನಲ್ಲಿ ಯುವತಿಯರಿಗೆ ಗಾಳ ಹಾಕಿ, ಅವರನ್ನು ಲೈಂಗಿಕವಾಗಿ ಬಳಸಿಕೊಂಡು ನಂತರ ಹಣ ಕೀಳುತ್ತಿದ್ದ ಆರೋಪಿಯನ್ನ ಮೈಸೂರಿನ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬಸವಟಿಕೆ ಗ್ರಾಮದ ಗುರುಸಿದ್ದಪ್ಪ ಎಂಬುವರ ಪುತ್ರ ಶಿವಪ್ರಕಾಶ್ ಬಿ. ಜಿ. ಬಂಧಿತ ಆರೋಪಿ. ಈತ ಗೂಗಲ್ ಮೀಟ್, ಫೇಸ್ ಬುಕ್ನಲ್ಲಿ ಯುವತಿಯರಿಗೆ ಗಾಳ ಹಾಕುತ್ತಿದ್ದ. ಯುವತಿಯರನ್ನ ಪರಿಚಯಿಸಿಕೊಂಡು ಪ್ರೀತಿ ಪ್ರೇಮದ ನಾಟಕವಾಡುತ್ತಿದ್ದ. ಬೀಳುವ ಯುವತಿಯರನ್ನ ಲೈಂಗಿಕವಾಗಿ ಬಳಸಿಕೊಂಡು, ವಿಡಿಯೋ ಮಾಡಿಟ್ಟುಕೊಂಡು ಹಣ ಕೀಳುತ್ತಿದ್ದ. ಇದನ್ನೂ ಓದಿ :- ರಾಜ್ಯ ಸರ್ಕಾರ ಮತಾಂತರ ಕಾಯ್ದೆ ತಂದಿರೋದನ್ನ ನಾನು ಸ್ವಾಗತಿಸುತ್ತೇನೆ – ಪ್ರಮೋದ್ ಮುತಾಲಿಕ್
ಮೈಸೂರು ಮೂಲದ ಯುವತಿಯೊಬ್ಬರ ಜೊತೆಗೂ ಶಿವಪ್ರಕಾಶ್ ಸ್ನೇಹ, ಪ್ರೀತಿ, ನಾಟಕವಾಡಿ, ಯುವತಿಯನ್ನ ಲೈಂಗಿಕವಾಗಿ ಬಳಸಿಕೊಂಡು 20 ಲಕ್ಷದವರೆಗೆ ಹಣ ಪಡೆದಿದ್ದ ಎಂದು ಆರೋಪಿಸಲಾಗಿದೆ. ಇದರಿಂದ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಜಿಲ್ಲಾ ಪೊಲೀಸರು ಆರೋಪಿ ಶಿವಪ್ರಕಾಶ್ನನ್ನು ಬಂಧಿಸಿದ್ದಾರೆ. ಈತ ಹಲವು ಯುವತಿಯರನ್ನು ದುರುಪಯೋಗ ಮಾಡಿಕೊಂಡು ಏಕಾಂತದಲ್ಲಿರುವ ವಿಡಿಯೋ ಮಾಡಿಕೊಂಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. 15 ಕ್ಕೂ ಹೆಚ್ಚು ಹುಡುಗಿಯರ ಜೀವನದಲ್ಲಿ ಈತ ಆಟವಾಡಿದ್ದಾನೆ.
ಇದನ್ನೂ ಓದಿ :- ಕಾಫಿ ನಾಡು ಚಿಕ್ಕಮಗಳೂರಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ