ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಪುರುಷರ ಜನನಾಂಗ ಚಿಕ್ಕದಾಗುತ್ತಿದೆ ಎಂದು ಪರಿಸರ ತಜ್ಞರೊಬ್ಬರು ತಮ್ಮ ವರದಿಯಲ್ಲಿ ಎಚ್ಚರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜನಿಸುತ್ತಿರುವ ಗಂಡು ಮಕ್ಕಳಲ್ಲಿ ಹುಟ್ಟುವಾಗಲೇ ಜನನಾಂಗ ಚಿಕ್ಕದಾಗಿರುವುದು ಪತ್ತೆಯಾಗಿದೆ. ಇದಕ್ಕೆ ಕಾರಣ ಹುಡುಕಿದಾಗ ಪಥಲೇಟ್ಸ್ ಎಂಬ ರಾಸಾಯನಿಕ ಕಾರಣ ಎಂಬುದು ತಿಳಿದು ಬಂದಿದೆ.
ಪಥಲೇಟ್ಸ್ ರಾಸಾಯನಿಕ ಸಾಮಾನ್ಯವಾಗಿ ಪ್ಲಾಸ್ಟಿಕ್ ಗಳಲ್ಲಿ ಬಳಸಲಾಗುತ್ತಿದ್ದು, ಇದು ಮನುಷ್ಯನ ದೇಹವನ್ನು ಸೇರುತ್ತಿದೆ. ಇದರಿಂದ ಹಾರ್ಮೊನ್ ಗಳ ಮೇಲೆ ಪರಿಣಾಮ ಬೀರುತ್ತಿದ್ದು, ಜನನಾಂಗ ಚಿಕ್ಕದಾಗುತ್ತಿದೆ ಎಂದು ಪರಿಸರ ತಜ್ಞ ಹೇಳಿದ್ದಾರೆ.
ಪರಿಸರ ತಜ್ಞ ಶಾನ್ನ ಸ್ವಾನ್ ತಮ್ಮ ವರದಿಯಲ್ಲಿ ಈ ವಿಷಯ ತಿಳಿಸಿದ್ದು, ಪುರುಷ ಮತ್ತು ಮಹಿಳೆಯರ ಸಂತಾನ ಸಮಸ್ಯೆಗಳಿಗೆ ಮಾಲಿನ್ಯ ಕಾರಣವಾಗಿದೆ. ಪುರುಷರ ವೀರ್ಯ ಪ್ರಮಾಣದಲ್ಲಿ ಕುಸಿತ ಆಗುತ್ತಿದ್ದರೆ, ಮಹಿಳೆಯರಲ್ಲಿ ಅಂಡಾಣುಗಳ ಕೊರತೆ ಕಾಡುತ್ತಿದೆ ಎಂದು ವಿವರಿಸಿದ್ದಾರೆ.