ಈ ಬಾರಿ 40 ಪರ್ಸೆಂಟ್ ಓಟ್ ನನಗೆ ಹೆಚ್ಚು ಬರುತ್ತವೆ ಅನ್ನೋ ನಂಬಿಕೆ ಇದೆ ಎಂದು ಹಾವೇರಿಯಲ್ಲಿ (Haveri) ಬಿಜೆಪಿ (Bjp) ಅಭ್ಯರ್ಥಿ ಬಸವರಾಜ್ ಹೊರಟ್ಟಿ(Basavaraj horatti) ಹೇಳಿದ್ದಾರೆ . ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ನಾನು ಏನೆಲ್ಲ ಕೆಲಸಗಳನ್ನ ಮಾಡುತ್ತೇನೆ ಎಂಬುದರ ಬಗ್ಗೆ ಬುಕ್ಸ್ ಪ್ರಿಂಟ್ ಮಾಡಿ ಹಂಚಿರುವೆ .
ವಿರೋದ ಪಕ್ಷದವರ ಮಾತಿಗೆ ನಾನು ಬೆಲೆ ಕೊಡುವುದಿಲ್ಲ.ನನ್ನ ವಿರುದ್ದ ಅವರಿಗೆ ಹೇಳೋದಕ್ಕೆ ಏನು ಇಲ್ಲ ಆದ್ರೂ ಹೇಳ್ತಾರೆ. ಶಿಕ್ಷಕರನ್ನು ಹೆದರಿಸಿ ಓಟ್ ಹಾಕಿಸಿಕೊಳ್ತೇನೆ ಅಂತಾರೆ. ಶಿಕ್ಷಕರನ್ನು ಹೆದರಿಸೋಕೆ ಆಗುತ್ತಾ? ಹೆದರಿಸಿ ಬೆದರಿಸಿ 7 ಬಾರಿ ಗೆಲ್ಲೋಕೆ ಆಗುತ್ತಾ? ಎಂದು ಪ್ರಶ್ನಿಸಿದದಾರೆ. ವಿರೋಧ ಪಕ್ಷದವರ ಮಾತಿಗೆ ನಾನು ತಲೆಕೆಡಿಸಿಕೊಳ್ಳಲ್ಲ. ನನಗೆ ಎಲ್ಲಾ ಪಕ್ಷದಲ್ಲೂ ಸ್ನೇಹಿತರಿದ್ದಾರೆ .ಕಾಂಗ್ರೆಸ್ ನವರೂ ನನಗೆ ಓಟ್ ಹಾಕ್ತಾರೆ .ನಾನು ಚುನಾವಣೆಗೆ ಸ್ಪರ್ಧಿಸಿದಾಗ ಯಾವ ಅಭ್ಯರ್ಥಿ ಬಗ್ಗೆಯೂ ಮಾತಾಡೋಕೆ ಹೋಗಿಲ್ಲ.
ಪಠ್ಯ ಪುಸ್ತಕ ವಿವಾದ ವಿಚಾರ
ಯಾವುದೇ ರಾಜಕೀಯ ಪಕ್ಷಗಳು ಇದರಲ್ಲಿ ಭಾಗವಹಿಸಬಾರದು .ಶಿಕ್ಷಣ ಇಲಾಖೆಯಲ್ಲಿ ಡಿ.ಎಸ್.ಸಿ ಆರ್ ಸಿ ಅಂತ ಒಂದು ಸಂಸ್ಥೆ ಇದೆ .ಅವರೇ ಸಿಲೆಬಸ್ ಮತ್ತು ಬುಕ್ ಗಳನ್ನು ತಯಾರಿ ಮಾಡೋದು .ಅದರಲ್ಲಿ ನಾವು ಯಾರೂ ಹಸ್ತ ಕ್ಷೇಪ ಮಾಡಬಾರದು ಎಂದು ಹೊರಟ್ಟಿ ತಿಳಿಸಿದ್ರು . ಇದನ್ನೂ ಓದಿ : – ರಾಜ್ಯ ರಾಜಕಾರಣಕ್ಕೆ ಮರಳುವ ಪ್ರಶ್ನೆಯೇ ಇಲ್ಲ – ಶೋಭಾ ಕರಂದ್ಲಾಜೆ