ಮಲೆನಾಡಿನಲ್ಲಿ ಹರಡುತ್ತಿರೋ ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿ ( CHIKKAMAGALURU ) ನ ಕೊಪ್ಪದಲ್ಲಿ ಬಸವರಾಜ್ ಬೊಮ್ಮಾಯಿ ( BASAVARAJ BOMMAI ) ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರ ದಿಂದ ಯೂನಿವರ್ಸಿಟಿ ಟಿಂ ಕಳುಹಿಸಿ ಅಧ್ಯಯನ ಮಾಡಿಸಲಾಗುತ್ತಿದೆ. ನಿರಂತರ ಮಳೆ ಇರುವುದರಿಂದ ರೋಗ ಹರಡುತ್ತಿದೆ. ಫಂಗಸ್ ತಡೆಯಲು ಔಷಧಿ ಸಿಂಪಡಿಸುವ ಕೆಲಸವಾಗ್ತಿದೆ. ರೋಗ ಹರಡಬಾರದೆಂದು ತಡೆಯಲು 10 ಕೋಟಿ ಬಿಡುಗಡೆ ಮಾಡಿದ್ದೇನೆ. ಸೈಟಿಂಸ್ಟ್ ಯಾವುದು ಔಷಧಿ ಹೇಳ್ತಾರೆ ಅದನ್ನು ಕೂಡಲೇ ಸಿಂಪಡಿಸ್ತೇವೆ ಎಂದು ಹೇಳಿದ್ರು. ಮೂಡಿಗೆರೆ ಶಾಸಕ ಮೇಲೆ ಹಲ್ಲೆ ಪ್ರಕರಣವಾಗಿ ಮಾತನಾಡಿದ ಅವರು, ಈ ಬಗ್ಗೆ ಚಿಕ್ಕಮಗಳೂರಿನ ಎಸ್ಪಿ ಜೊತೆ ಮಾತಾನಾಡಿದ್ದೇನೆ ಸಮಗ್ರ ತನಿಖೆ ಮಾಡುವಂತೆ ಎಸ್ಪಿ ಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ರು.
ಇದನ್ನೂ ಓದಿ : – DO OR DIE ಪಂದ್ಯದಲ್ಲಿ ಮಿಂಚಿದ MESSI – ನಾಕೌಟ್ ರೇಸ್ ನಲ್ಲಿ ಉಳಿದುಕೊಂಡ ಅರ್ಜೆಂಟೀನಾ