ಸಿಡಿ ಪ್ರಕರಣದ ಸಂತ್ರಸ್ತ ಯುವತಿ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರಬಹುದು. ನಾನು ಇದುವರೆಗೂ ಆಕೆಯನ್ನು ಭೇಟಿಯಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂತ್ರಸ್ತ ಮಹಿಳೆ ಇದುವರೆಗೆ ನನ್ನನ್ನು ಭೇಟಿಯಾಗಿಲ್ಲ. ಪ್ರತಿದಿನ ಸಾವಿರಾರು ಜನ ನನ್ನನ್ನು ಭೇಟಿಯಾಗುತ್ತಿರುತ್ತಾರೆ. ಈಗಲೂ ಸಂತ್ರಸ್ತೆ ನನ್ನನ್ನು ಭೇಟಿಯಾದರೆ ನಾನು ಆಕೆಗೆ ಸಹಾಯ ಮಾಡಲು ಸಿದ್ಧ ಎಂದರು.
ನರೇಶ್ ನನ್ನ ಆಪ್ತ, ಮಾಧ್ಯಮದಲ್ಲಿ ಇದ್ದವನು. ನರೇಶ್ ನನಗೆ ಬಹಳ ಪರಿಚಯ ಇದೆ. ಅವನ ಮನೆಗೂ ಹೋಗಿ ಬಂದಿದ್ದೇನೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ನರೇಶ್ ನನ್ನನ್ನು ಸಂಪರ್ಕಿಸಿಲ್ಲ. ಸಹಾಯ ಕೇಳಿಕೊಂಡು ತುಂಬಾ ಜನ ನನ್ನ ಬಳಿ ಬರುತ್ತಾರೆ. ನಾನು ಅವರಿಗೆ ಸಹಾಯ ಮಾಡಿದ್ದೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.