ರಾಜ್ಯ ಸರ್ಕಾರ ಮತಾಂತರ ಕಾಯ್ದೆ ತಂದಿದ್ದಕ್ಕೆ ನಾನು ಸ್ವಾಗತ ಮಾಡ್ತೇನೆ. ಈ ಬಗ್ಗೆ ಸಿಎಂ ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಧಾರವಾಡದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಬುಡಕಟ್ಟು ಹಾಗೂ ದಲಿತರನ್ನ ಕ್ರಿಶ್ಚಿಯನ್ನರು ಗುರಿ ಇಟ್ಟು ಮತಾಂತರ ಮಾಡುತಿದ್ದರು. ಎಲ್ಲ ಜಾತಿಗೂ ಮತಾಂತರ ಆವರಿಸಿತ್ತು. ಬಹಳ ದೊಡ್ಡ ಪ್ರಮಾಣದಲ್ಲಿ ಕ್ರಿಶ್ಚಿಯನ್ ಮತಾಂತರ ಕ್ಯಾನ್ಸರ್ ಹರಡುತ್ತಿದೆ. ಸರ್ಕಾರ ಈ ಕಾಯ್ದೆಯಲ್ಲಿ ಕಟ್ಟು ನಿಟ್ಡಿನ ನಿಯಮ ಹಾಕಿದ್ದು ಸ್ವಾಗತಾರ್ಹ. ಇದನ್ನೂ ಓದಿ :- ಕಾಫಿ ನಾಡು ಚಿಕ್ಕಮಗಳೂರಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ
10 ವರ್ಷ ಶಿಕ್ಷೆ ವಿಧಿಸಿದ್ದಾರೆ, ಶಾಲೆ ಕಾಲೇಜಿನ ಆಮಿಷ ಒಡ್ಡುವುದು, ಮದುವೆಗೆ ಆಮೀಷ ಒಡ್ಡುವುದನ್ನ ಈ ನಿಯಮದಲ್ಲಿ ಅಳವಡಿಸಿದ್ದು ಒಳ್ಳೆಯದಾಗಿದೆ. ಇವರು ಒತ್ತಾಯದಿಂದ ಮತಾಂತರ ಮಾಡುವದು ಅಷ್ಟೇ ಅಲ್ಲ, ಆಸೆ ಆಮಿಷ ಒಡ್ಡುವದು ಮತಾಂತರವೇ. ಕ್ರಿಶ್ಚಿಯನ್ನರು ಇದನ್ನ ಮಾಡುತಿದ್ದು, ಇದನ್ನ ತಡೆಯಬೇಕಾಯಗಿದೆ. ಇದನ್ನ ಜಾರಿಗೆ ಇರುವದು ಮುಖ್ಯ. ಕಾಯ್ದೆ ಇಲ್ಲದೇ ಚರ್ಚ್ ಗಳು, ಮನೆಗಳನ್ನೇ ಕಾಯ್ದೆ ಬಾಹಿರ ಚರ್ಚೆ ಮಾಡುತ್ತಿದ್ದಾರೆ.
ಇದನ್ನ ಹದ್ದು ಬಸ್ತಿನಲ್ಲಿ ಇಡಬೇಕು. ಕಾಯ್ದೆಯನ್ನ ಜಾರಿಗೆ ತರುವದು ಸರ್ಕಾರದ ಜವಾಬ್ದಾರಿ. ಸರ್ಕಾರ ಪೊಲೀಸರ ಮೂಲಕ ಕಾನೂನು ಜಾರಿ ಮಾಡಬೇಕು. ಇಲ್ಲಾಂದ್ರೆ ಸಂಘಟನೆಗಳು ಮುಂದೆ ಬಂದರೆ ಸಂಘರ್ಷ ಉಂಟಾಗುತ್ತೆ. ಅದಕ್ಕೆ ಎಲ್ಲವನ್ನ ಹದ್ದು ಬಸ್ತಿನಲ್ಲಿ ಇಡಬೇಕು ಎಂದು ಆಗ್ರಹ ಮಾಡ್ತೇನೆ ಎಂದು ತಿಳಿಸಿದ್ರು.
ಇದನ್ನೂ ಓದಿ :- ಬಸವರಾಜ್ ಹೊರಟ್ಟಿ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಿದೆ- ಸಿಎಂ ಬೊಮ್ಮಾಯಿ