ಇವತ್ತು ನಾನು ಕೊಪ್ಪಳ ಪ್ರವಾಸ ಮಾಡ್ತಿದ್ದೇನೆ. ಅಂಜನಾದ್ರಿ ಬೆಟ್ಟ (Anjanadri hill) ದ ಅಭಿವೃದ್ಧಿಗೆ 100 ಕೋಟಿ ಕೊಟ್ಟಿದ್ದೇನೆ ಎಂದು ಸಿಎಂ ಬೊಮ್ಮಾಯಿ (Bommai) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಇವತ್ತು ಸಮಗ್ರ ಅಭಿವೃದ್ಧಿ ಸ್ಥಳ ವೀಕ್ಷಣೆ ಮಾಡಿ ಬರ್ತೀನಿ. ಅಲ್ಲಿನ ಲ್ಯಾಂಡ್ ನೋಡಿ ಕಾಮಗಾರಿ ಶೀಘ್ರವೇ ಆರಂಭಿಸುವ ತೀರ್ಮಾನ ಮಾಡ್ತೀನಿ ಎಂದು ತಿಳಿಸಿದ್ರು.
ಇದೇ ವೇಳೆ ರಾಜ್ಯಾದ್ಯಂತ ಮಳೆ ಹಿನ್ನೆಲೆಯಲ್ಲಿ , ಮಳೆ ಹಾನಿ ಕುರಿತು ನಾಳೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಮಳೆ ನಷ್ಟದ ಬಗ್ಗೆ ಚರ್ಚಿಸಿ, ಪರಿಹಾರದ ಬಗ್ಗೆ ಸೂಚನೆ ಕೊಡ್ತೀನಿ ಎಂದು ತಿಳಿಸಿದ್ರು.
ಮಂಕಿಪಾಕ್ಸ್ (Monkey pox) ಆತಂಕ ಹಿನ್ನೆಲೆಯಲ್ಲಿ ನಾಳೆ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸ್ತೀನಿ. ಸಭೆ ನಡೆಸಿ ಕಾಯಿಲೆ ಬಗ್ಗೆ ಮಾಹಿತಿ ಪಡೆದು. ಯಾವೆಲ್ಲ ಕ್ರಮ ತಗೋಬೇಕು ಅಂತ ಚರ್ಚಿಸಿ ನಿರ್ಧಾರ ಮಾಡ್ತೀನಿ ಎಂದು ಹೇಳಿದ್ದಾರೆ.
ಆಗಸ್ಟ್ 3 ರಂದು ಸಿದ್ದರಾಮೋತ್ಸವ ವಿಚಾರ
ಸಿದ್ದರಾಮೋತ್ಸವ ಅವರದ್ದು, ಅದು ಈಗಾಗಲೇ ಗೊತ್ತಿರುವ ವಿಚಾರ. ಆದರೆ ನಾವು, ಸಿದ್ದರಾಮ ದೇವರನ್ನು ಪೂಜೆ ಮಾಡೋರು.ಹೀಗಾಗಿ ನಾನು ಇಂದು ದಾವಣಗೆರೆಗೆ ಸಿದ್ದರಾಮನ ದೇವರ ಉತ್ಸವಕ್ಕೆ ಹೋಗ್ತಿದ್ದೇನೆ. ಆದರೆ ಆ ಸಿದ್ದರಾಮೋತ್ಸವಕ್ಕಲ್ಲ ಎಂದು ನಗೆ ಚಟಾಕಿ ಹಾರಿಸಿದ್ರು. ಇದನ್ನು ಓದಿ :- ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ 36 ರೂ. ಇಳಿಕೆ – ಪರಿಷ್ಕೃತ ದರ ಇಂದಿನಿಂದಲೇ ಜಾರಿ
ಇದೇ ವೇಳೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಪ್ರಗತಿ ಆಗ್ತಿದೆ. ಆದಷ್ಟು ಬೇಗನೇ ಕೊಲೆಗಡುಕರ ಬಗ್ಗೆ ಪತ್ತೆ ಮಾಡಲಾಗುತ್ತೆ. ಇನ್ನೊಂದೆರಡು ಮೂರು ದಿನಗಳಲ್ಲಿ ಪ್ರಕರಣವನ್ನು ಎನ್ಐಎ ಗೆ ವರ್ಗಾವಣೆ ಮಾಡ್ತೇವೆ. ತಾಂತ್ರಿಕ ಮತ್ತು ಪೇಪರ್ ವರ್ಕ್ ನಡೀತಿದೆ. ಆದಷ್ಟು ಬೇಗ ಪ್ರಕರಣ ವರ್ಗಾವಣೆ ಮಾಡ್ತೇವೆ. ಈಗಾಗಲೇ ಎನ್ಐಎಗೆ ಕೇಸ್ ಬಗ್ಗೆ ಅನೌಪಚಾರಿಕವಾಗಿ ತಿಳಿಸಿದ್ದೇವೆ. ಕೆಲವು ಎನ್ಐಎ ಅಧಿಕಾರಿಗಳು ಕೇರಳ ಮತ್ತು ಮಂಗಳೂರಿನಲ್ಲಿ ಈಗಾಗಲೇ ಮಾಹಿತಿ ಪಡೆಯುತ್ತಿದ್ದಾರೆ.
ಕೊಲೆಯಾದ ಫಾಸಿಲ್ ಹಾಗೂ ಮಸೂದ್ ಮನೆಗೆ ಸಿಎಂ ಭೇಟಿ ಕೊಡದ ಬಗ್ಗೆ ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಕೊಲೆಯಾದ ಫಾಜಿಲ್, ಮಸೂದ್ ಮನೆಗಳಿಗೆ ಮುಂಬರುವ ದಿನಗಳಲ್ಲಿ ಭೇಟಿ ಕೊಡ್ತೇನೆ ಎಂದು ಹೇಳಿದರು. ಇದೇ ವೇಳೆ ಜನೋತ್ಸವ ಮಾಡುವ ಬಗ್ಗೆ ಚರ್ಚೆ ಮಾಡ್ತಿದ್ದೇವೆ. ಸಮಗ್ರವಾಗಿ ಚರ್ಚೆ ಮಾಡ್ತಿದ್ದೇವೆ, ಪ್ರಾದೇಶಿಕ ಮತ್ತು ಜಿಲ್ಲಾ ಸಮಾವೇಶಗಳನ್ನು ನಡೆಸುವ ಬಗ್ಗೆ ಚರ್ಚೆ ಮಾಡ್ತಿದ್ದೇವೆ. ಈ ಬಗ್ಗೆ ನಮ್ಮ ಪಕ್ಷದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ : – ದಕ್ಷಿಣ ಕನ್ನಡದಲ್ಲಿ ಸರಣಿ ಹತ್ಯೆ ಪ್ರಕರಣ- DGP ಪ್ರವೀಣ್ ಸೂದ್ ಭೇಟಿ