ಇಂದು ಚಾಮರಾಜಪೇಟೆ (chamarajpete) ನಾಗರಿಕ ಒಕ್ಕೂಟ, ಶ್ರೀರಾಮಸೇನೆ, ಹಿಂದೂ ಜನಜಾಗೃತಿ ಸೇರಿದಂತೆ ಅನೇಕ ಹಿಂದೂ ಸಂಘಟನೆ ಬಂದ್ ಗೆ ಕರೆ ಕೊಟ್ಟಿವೆ.
ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚಾಮರಾಜಪೇಟೆ ಬಂದ್ ಆಗಲಿದೆ. ಈದ್ಗಾ ಆಟದ ಮೈದಾನವನ್ನು ವಕ್ಫ್ ಬೋರ್ಡ್ ಗೆ ನೀಡಬಾರದು. ಮೈದಾನ ಬಿಬಿಎಂಪಿ (bbmp) ಸುಪರ್ದಿಯಲ್ಲಿಯೇ ಇದ್ದು ಆಟದ ಮೈದಾನವಾಗಿರಬೇಕು. ಮೈದಾನಕ್ಕೆ ಈದ್ಗಾ (ediga) ಹೆಸರಿಗೆ ಬದಲಾಗಿ ಜಯಚಾಮರಾಜ ಒಡೆಯರ್ ಹೆಸರು ಇಡಬೇಕು ಎಂದು ಸಂಘಟನೆಗಳು ಒತ್ತಾಯಿಸ್ತಿವೆ. ಇದನ್ನೂ ಓದಿ : – ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಳಕೆದಾರರಿಗೆ ಬಿಬಿಎಂಪಿ ದಂಡ
ಅಂಗಡಿ-ಮುಂಗಟ್ಟುಗಳು, ಬ್ಯಾಂಕ್, ಕಾಲೇಜು, ವಾಣಿಜ್ಯ ಕಟ್ಟಡಗಳಲ್ಲಿ ಭಿತ್ತಿ ಪತ್ರ ಹಂಚಿ ಬಂದ್ಗೆ ಬೆಂಬಲ ಕೊಡುವಂತೆ ಹೋರಾಟಗಾರರು ಮನವಿ ಮಾಡಿದ್ದಾರೆ. ಔಷಧಿ ಅಂಗಡಿಗಳು, ಆಸ್ಪತ್ರೆಗಳು, ಹಣ್ಣು-ತರಕಾರಿ, ಹಾಲು, ದಿನಸಿ ಅಂಗಡಿ, ಬ್ಯಾಂಕ್ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಶಾಲಾ-ಕಾಲೇಜು ತೆರೆದಿರುತ್ತವೆ, ಎಟಿಎಂ ಇರುತ್ತೆ ಹಾಗೂ ವಾಹನ ಸಂಚಾರ ಯಥಾಸ್ಥಿತಿ ಇರಲಿದೆ.
ಇದನ್ನೂ ಓದಿ : – ಕಲಬುರಗಿಯಲ್ಲಿ ನಗರ ಸಭೆ ಅಧ್ಯಕ್ಷೆ ಪತಿಯ ಬರ್ಬರ ಹತ್ಯೆ