ತುಳುನಾಡ ದೈವಾರಾಧನೆ ಹೆಸರಿನಲ್ಲಿ ದುಡ್ಡು ಮಾಡುವವರ ವಿರುದ್ಧ ದೈವಾರಾಧಕರು ತೊಡೆತಟ್ಟಿದ್ದಾರೆ. ಇನ್ಮುಂದೆ ವ್ಯಾಪಾರದ ಹೆಸರಿನಲ್ಲಿ ದೈವಾರಾಧನೆ ನಡೆಸಿದವರು, ಮುಂದೊಂದು ದಿನ ಕಾನೂನು ಕ್ರಮ ಹಾಗೂ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ದೈವಾರಾಧಕರು ತಿಳಿಸಿದ್ದಾರೆ.
ದೈವಾರಾಧನೆ ಸಿನಿಮಾ ಮಾಡಿದರೆ, ಮುಲಾಜಿಲ್ಲದೇ ವಿರೋಧಿಸಲಾಗುವುದು ಎಂದಿದ್ದಾರೆ. ದೈವದ ಕೋಲ ಸೇವೆಯ ಹೆಸರಿನಲ್ಲಿ ಲಕ್ಷಾಂತರ ರೂ. ಲೂಟಿ ಮಾಡುತ್ತಿದ್ದಾರೆ ಎಂದು ತುಳುನಾಡ ದೈವಾರಾಧನ ಸಂರಕ್ಷಣಾ ಯುವವೇದಿಕೆ, ದೈವಾರಾಧನ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿಗಳು ಆರೋಪಿಸಿವೆ. ದೈವ ನಿಂದನೆ ಮಾಡಿ ದಂಧೆ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿವೆ. ಇದನ್ನೂ ಓದಿ : – ಟಾಲಿವುಡ್ ನ ಜನಪ್ರಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ, ಹಾಲಿವುಡ್ ಗೆ ಹೊಗ್ತಾರಾ…?
ಕರಾವಳಿ ಹೊರಗಿನ ದೈವಾರಾಧನೆ ವಿರುದ್ಧ ಮಂಗಳೂರಿನ ಜನ ಸಿಡಿದೆದ್ದಿದ್ದಾರೆ. ದೈವಗಳ ಹೆಸರಲ್ಲಿ ದಂಧೆಗೆ ಇಳಿದವರ ವಿರುದ್ಧ ಮಂಗಳೂರಿನ ಕುತ್ತಾರು ಬಳಿಕ ಕೊರಗಜ್ಜನ ಆದಿಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ತುಳುನಾಡ ದೈವಾರಾಧನ ಸಂರಕ್ಷಣಾ ಯುವವೇದಿಕೆ, ದೈವಾರಾಧನ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ಹಾಗೂ ಸಮಸ್ತ ದೈವಾರಾಧಕರಿಂದ ಪ್ರಾರ್ಥನೆ ಸಲ್ಲಿಸಲಾಗಿದೆ. ಮೈಸೂರು ಮೂಲದ ಕೆಲ ಭಕ್ತರೂ ಆದಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : – ವೃದ್ಧನ ಹೊಟ್ಟೆಯಲ್ಲಿದ್ದ 187 ಕಾಯಿನ್ ಗಳನ್ನು ಹೊರತೆಗೆದ HSK ಆಸ್ಪತ್ರೆ ವೈದ್ಯರು