ಸಿದ್ದರಾಮಯ್ಯ(SIDDARAMAIAH) ಅವರಿಗೆ ತಾಕತ್ತಿದ್ರೆ ಕಾಂಗ್ರೆಸ್ (CONGRESS ) ನಿಂದ ಹೊರಬಂದು ಸ್ವಂತ ಪಕ್ಷ ಕಟ್ಟಿ 5 ಸೀಟು ಗೆದ್ದು ತೋರಿಸಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D KUMARSWAMY) ಸವಾಲು ಹಾಕಿದ್ದಾರೆ.
ರಾಯಚೂರಿ (RAICHURU) ನಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ 4-5 ಜಿಲ್ಲೆಗೆ ಸೀಮಿತ ಅಂತಾರೆ, ತಾಕತ್ತಿದ್ರೆ ಸಿದ್ದರಾಮಯ್ಯ ಸ್ವಂತ ಪಕ್ಷ ಕಟ್ಟಿ ನಾಲ್ಕೈದು ಸೀಟು ಗೆದ್ದುಕೊಂಡು ಬರಲಿ ನೋಡೋಣ. ನಮ್ಮ ಪಕ್ಷದಿಂದ ಬೆಳೆದು ಹೋಗಿ ಇನ್ಯಾವುದೋ ಪಕ್ಷದಲ್ಲಿದ್ದುಕೊಂಡು ಮಾತನಾಡುತ್ತಾರೆ. ಸಿದ್ದರಾಮಯ್ಯಗೆ ಚಾಲೆಂಜ್ ಹಾಕ್ತೀನಿ ಕಾಂಗ್ರೆಸ್ ಪಕ್ಷ ಬಿಟ್ಟು ಬಂದು, ಪಕ್ಷ ಕಟ್ಟಿ 5 ಸೀಟು ಗೆದ್ದುಕೊಂಡು ಬರಲಿ. ನಾವೆಲ್ಲ ಇದ್ದಾಗಲೇ 58 ಸೀಟು ಬಂದಿತ್ತು ಅಂತಾರೆ, ಅವರು ಹೋದಾಗಲೆ ಏಕಾಂಗಿ ಹೋರಾಟದಲ್ಲಿ 40 ಸೀಟು ತಂದಿದ್ದೇವೆ. ಈ ಚುನಾವಣೆಯಲ್ಲಿ ರಾಜ್ಯಾದ್ಯಂತ ಜನ ಪಕ್ಷಕ್ಕೆ ಶಕ್ತಿ ಕೊಡ್ತಾರೆ. ಸಿದ್ದರಾಮಯ್ಯ ಸವಾಲು ಸ್ವೀಕಾರ ಮಾಡಿಕೊಂಡು ಹೊರಟಿದ್ದೇನೆ ಎಂದು ಹೇಳಿದ್ದಾರೆ. ಇದನ್ನು ಓದಿ :- ಹಾಸನ ಟಿಕೆಟ್ ದೇವೇಗೌಡರು ಡಿಸೈಡ್ ಮಾಡ್ತಾರೆ- HDKಗೆ ಟಾಂಗ್ ಕೊಟ್ಟ ಸೂರಜ್ ರೇವಣ್ಣ
ಸಿದ್ದರಾಮಯ್ಯ ಅವರದ್ದು ಕೊನೆಯ ಚುನಾವಣೆ’ ಎಂಬ ಯತೀಂದ್ರ ( YATHINDRA SIDDARAMAIAH) ಹೇಳಿಕೆಗೆ ತಿರುಗೇಟು ನೀಡಿರುವ ಹೆಚ್.ಡಿ.ಕೆ, ತಾಯಿ ಚಾಮುಂಡೇಶ್ವರಿಯೇ ಅವರ ಮಗನ ಬಾಯಿಂದ ಹೇಳಿಸಿದ್ದಾರೆ. ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸಲಿ, ಅಲ್ಲೇ ಅವರ ಕೊನೆ ಚುನಾವಣೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಬಿಜೆಪಿಗೆ ಇವತ್ತು ಕಾಂಗ್ರೆಸ್ ಪಕ್ಷ ಪರ್ಯಾಯ ಪಕ್ಷವಲ್ಲ. ಆಯಾ ರಾಜ್ಯಗಳಲ್ಲಿ ಇರುವ ಪ್ರಾದೇಶಿಕ ಪಕ್ಷಗಳೇ ಪರ್ಯಾಯವಾಗಿವೆ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಮತ್ತೇ ಚೇತರಿಸಿಕೊಳ್ಳಲು ಆಗಲ್ಲ. ದೇಶದಲ್ಲಿ ಒಕ್ಕೂಟ ವ್ಯವಸ್ಥೆ ಉಳಿಸಲು ಪ್ರಾದೇಶಿಕ ಪಕ್ಷಗಳು ಒಂದುಗೂಡಬೇಕಿದೆ. ಅದರಲ್ಲಿ ಜೆಡಿಎಸ್ ಪಕ್ಷವೂ ಇರುತ್ತೆ ಅದನ್ನ ಹೇಳಲು ಹಿಂಜರಿಕೆಯಿಲ್ಲ. ರಾಯಚೂರಿನಲ್ಲಿ ಕಳೆದ ನಾಲ್ಕು ದಿನ ಪ್ರಚಾರ ಮುಗಿದಿದೆ. ರಾಯಚೂರು ಗ್ರಾಮಾಂತರ ಪ್ರದೇಶದಲ್ಲಿ ಸರಿಪಡಿಸಿಕೊಳ್ಳಬೇಕಿದೆ. ಜನತಾದಳದ ಮತದಾರರ ಭದ್ರಕೋಟೆ ರಾಯಚೂರು. ನಮ್ಮ ಲೋಪದೋಷಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡ್ತೇವೆ ಎಂದು ತಿಳಿಸಿದ್ರು.
ಇದನ್ನು ಓದಿ :- ಪ್ರಜಾಧ್ವನಿ ಯಾತ್ರೆಯಿಂದ ಬಿಜೆಪಿಗೆ ಭಯ ಶುರುವಾಗಿದೆ – ಸಿದ್ದರಾಮಯ್ಯ