ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನೂ ಅಲ್ಲ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D KUMARASWAMY)ತಿರುಗೇಟು ನೀಡಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ಕುದುರೆ ಕೊಟ್ಟು ಕಾಲು ಕಟ್ ಮಾಡಿದ್ರೆ ಎಲ್ಲಿ ಓಡಿಸಲು ಆಗುತ್ತೆ? ಕಾಂಗ್ರೆಸ್ (CONGRESS) ನವರೇ ನಮ್ಮ ಮನೆ ಬಾಗಿಲಿಗೆ ಬಂದಿದ್ದು. ಎಲ್ಲಾ ಗೊತ್ತಿದ್ದೋರು ನಮ್ಮ ಮನೆ ಬಾಗಿಲಿಗೆ ಯಾಕೆ ಬಂದರು? ಈಗ ಕಾಂಗ್ರೆಸ್ನವರದ್ದು ಉಚಿತ ಖಚಿತ ಅನ್ನೋ ಸ್ಕೀಂ ಬೇರೆ. ಒಂದು ಚಡ್ಡಿ ತೆಗೆದುಕೊಂಡರೆ 2 ಫ್ರೀ ಅನ್ನೋ ಲೆಕ್ಕದ ರೀತಿ ಇವರದ್ದು ಎಂದು ಕಿಡಿಕಾರಿದ್ರು. 78 ಶಾಸಕರನ್ನು ಇಟ್ಟುಕೊಂಡು ಸರ್ಕಾರಿ ನಿವಾಸ ಬಿಟ್ಟುಕೊಡಲಿಲ್ಲ ಎಂದು ಸಿದ್ದರಾಮಯ್ಯ ಹೆಸರು ಹೇಳದೆ ಮಾಜಿ ಸಿಎಂ ಹೆಚ್ಡಿಕೆ ವಾಗ್ದಾಳಿ ಮಾಡಿದರು. ನಾನೇನು ರಸ್ತೆಯಲ್ಲಿ ನಿಂತು ಅಧಿಕಾರ ನಡೆಸಲ್ಲ. ಅಮಿತ್ ಶಾ, ರಣದೀಪ್ ಸುರ್ಜೇವಾಲ ಎಲ್ಲಿ ಇರುತ್ತಾರೆ? ನಾನೇನು ಆಟ ಆಡಲು ಹೋಗಿದ್ದನಾ ಎಂದು ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದ್ರು.
ಇದನ್ನು ಓದಿ :- ಕುಮಾರಸ್ವಾಮಿ ಕೊಕ್ಕರೆ ಇದ್ದಂತೆ.. ಎಲ್ಲೆಲ್ಲಿ ಮೀನಿರುತ್ತೆ ಅಲ್ಲಲ್ಲಿ ಹೋಗ್ತಿರುತ್ತಾರೆ – ಸಿ.ಪಿ ಯೋಗೇಶ್ವರ್