ಪಾಕಿಸ್ತಾನದ ಸಂಸತ್ತಿನಲ್ಲಿ ಇಂದು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಮತದಾನ ನಡೆಯಲಿದೆ. ಈ ಮೂಲಕ ಪ್ರಧಾನಿ ಇಮ್ರಾನ್ ಖಾನ್ ಪಾಕ್ ಇತಿಹಾಸದಲ್ಲಿ ಅವಿಶ್ವಾಸ ನಿರ್ಣಯ ಎದುರಿಸುತ್ತಿರುವ ಮೊದಲ ಪ್ರಧಾನಿಯಾಗಲಿದ್ದಾರೆ.
342 ಸದಸ್ಯ ಬಲದ ಪಾಕಿಸ್ತಾನ ಸಂಸತ್ತಿನಲ್ಲಿ 172 ಸದಸ್ಯರು ವಿರೋಧ ಪಕ್ಷದ ಸ್ಥಾನದಲ್ಲಿದ್ದು, ಪ್ರಧಾನಿ ಇಮ್ರಾನ್ ಖಾನ್ ಪದಚ್ಯುತಿಗೆ ಆಗ್ರಹಿಸುತ್ತಿದ್ದಾರೆ. ಆಡಳಿತಾರೂಢ ಮೈತ್ರಿಪಕ್ಷಗಳ ಸಹಾಯದಿಂದ ವಿರೋಧ ಪಕ್ಷಗಳಿಗೆ ಈಗ ಆಡಳಿತಾರೂಢ ಪಕ್ಷಕ್ಕಿಂತ ಹೆಚ್ಚಿನ ಸ್ಥಾನ ಸಿಕ್ಕಿದೆ. ಮೂಲಕ ಪಾಕಿಸ್ತಾನ ಟೆಹ್ರೀಕ್-ಇ-ಇನ್ಸಾಫ್(PTI) ಪಕ್ಷದ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಿಂದ ನಿರ್ಗಮಿಸುವುದು ಬಹುತೇಕ ಖಚಿತವಾಗಿದೆ.
ಇಮ್ರಾನ್ ಖಾನ್ ಗೆ 142 ಸದಸ್ಯರ ಬೆಂಬಲವಿದೆ. ಬಹುಮತ ಸಾಬೀತಿಗೆ 172 ಸದಸ್ಯರ ಬೆಂಬಲ ಬೇಕಾಗಿದೆ. ರಾಷ್ಟ್ರೀಯ ಅಸೆಂಬ್ಲಿ ಸೆಕ್ರೆಟರಿಯೇಟ್ ಶುಕ್ರವಾರ ಹೊರಡಿಸಿದ ‘ಆರ್ಡರ್ಸ್ ಆಫ್ ದಿ ಡೇ’ ಪ್ರಕಾರ, ಅವಿಶ್ವಾಸ ನಿರ್ಣಯದ ಮೇಲಿನ ಮತದಾನವು ಸಂಸತ್ತಿನ ಕೆಳಮನೆಯಾದ ರಾಷ್ಟ್ರೀಯ ಅಸೆಂಬ್ಲಿಯ (ಎನ್‌ಎ) ಆರು ಅಂಶಗಳ ಕಾರ್ಯಸೂಚಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಇದನ್ನು ಓದಿ :- “ಇಮ್ರಾನ್ ಓರ್ವ ಸೈಕೋಪಾತ್” ಅಂದ ಪಾಕ್ ಸುಂದರಿ ಯಾರು ಗೊತ್ತಾ..?