ಸಿಲಿಕಾನ್ ಸಿಟಿ (Silicon city) ಯಲ್ಲಿ ನಕಲಿ ವೈದ್ಯ (Doctor) ರ ಹಾವಳಿ ಹೆಚ್ಚಾಗುತ್ತಿದೆ. ಸ್ವಲ್ಪ ಯಾಮಾರಿದ್ರೂ ನಕಲಿ ವೈದ್ಯರು ಪ್ರಾಣಕ್ಕೆ ಕುತ್ತು ತಂದಿಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎನ್ನುವಂತೆ ಘಟನೆಯೊಂದು ಸಾಕ್ಷಿಯಾಗಿದೆ. ಮಾತ್ರೆ ಕೊಟ್ಟು ಸರಿಪಡಿಸಬಹುದಾಗಿದ್ದ ಕಾಯಿಲೆಯನ್ನ ನಕಲಿ ವೈದ್ಯ ಇಂಜೆಕ್ಷನ್, ಮಾತ್ರೆ ಕೊಟ್ಟು ಮಹಿಳೆಯನ್ನ (Women) ಶೋಚನಿಯ ಸ್ಥಿತಿಗೆ ತಂದೊಡ್ಡಿದ್ದಾನೆ.
ಜ್ವರ (Fever) ಅಂತ ಹೋದ ಮಹಿಳೆಯ ಸ್ಥಿತಿ ಶೋಚನಿಯವಾಗಿದ್ದು, ಜೀವನದ ಮೇಲಿನ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಗಾರ್ಮೆಂಟ್ಸ್ (Garments) ನಲ್ಲಿ ಕೆಲಸ ಮಾಡಿಕೊಂಡಿರೋ ಜ್ಯೋತಿಗೆ ಜ್ವರ ಇದ್ದ ಕಾರಣ ಹೆಗ್ಗನಹಳ್ಳಿ ಸಂಜೀವಿನಿ ನಗರದಲ್ಲಿದ್ದ ಸಹನಾ ಪಾಲಿಕ್ಲಿನಿಕ್ಗೆ ಹೋಗಿದ್ದಾರೆ. ಕ್ಲಿನಿಕ್ ನಲ್ಲಿದ್ದ ನಕಲಿ ಡಾಕ್ಟರ್ ನಾಗರಾಜ್ ಶವಣೂರ್ಗೆ ತೋರಿಸಿದ್ದಾರೆ. ಮಹಿಳೆಯ ಸೊಂಟದ ಭಾಗಕ್ಕೆ ಒಂದೇ ಜಾಗದಲ್ಲಿ ಎರಡು ಇಂಜೆಕ್ಷನ್ ಚುಚ್ಚಿ ಮಾತ್ರೆ ಬರೆದು ಕಳಿಸಿಕೊಟ್ಟಿದ್ದಾನೆ. ಇದನ್ನು ಓದಿ : – ಕೆಪಿಸಿಸಿ ಚುನಾವಣಾ ಸಮಿತಿ ರಚನೆ ಮಾಡಿದ ಹೈಕಮಾಂಡ್ …!
ದಿನ ಕಳೆದಂತೆ ಇಂಜೆಕ್ಷನ್ ಕೊಟ್ಟ ಜಾಗ ಸಂಪೂರ್ಣ ಕಪ್ಪಾಗಲು ಶುರುವಾಗಿದೆ. ಮತ್ತೆ ಕ್ಲಿನಿಕ್ಗೆ ಹೋಗಿ ಜ್ಯೋತಿ ನಾಗರಾಜ್ಗೆ ತೋರಿಸಿದ್ದಾರೆ. ಆಗಲೂ ಆಯಿಟ್ಮೆಂಟ್ ಕೊಟ್ಟು ಕಳಿಸಿದ್ದಾನೆ. ಕೊಟ್ಟ ಆಯಿಟ್ಮೆಂಟ್ಗೂ ಕಡಿಮೆ ಆಗದೇ ಇಂಜೆಕ್ಷನ್ ನೀಡಿದ ಜಾಗ ಕೊಳೆಯಲು ಶುರುವಾಗಿದೆ. ನಂತರ ಬೇರೊಂದು ಆಸ್ಪತ್ರೆಗೆ ಹೋದಾಗ ಶಸ್ತ್ರಚಿಕಿತ್ಸೆಗೆ ಸೂಚನೆ ನೀಡಿದ್ದಾರೆ. ವೈದ್ಯರ ಸೂಚನೆಯಂತೆ ಸದ್ಯ ಮಹಿಳೆ ಶಸ್ತ್ರಚಿಕಿತ್ಸೆ (Surgery) ಮಾಡಿಸಿದ್ದು, ಸ್ವಲ್ಪಮಟ್ಟಿಗೆ ನಡೆಯುತ್ತಿದ್ದು ನರಕ ಯಾತನೇ ಅನುಭವಿಸುತ್ತಿದ್ದಾರೆ.’
ಇದನ್ನು ಓದಿ : – ಹಳೆ ಮೈಸೂರು ಭಾಗಕ್ಕೂ ಸಿದ್ದರಾಮಯ್ಯ ಬಸ್ ಯಾತ್ರೆ ಬರಲಿ – ಕಾರ್ಯಕರ್ರ ಒತ್ತಾಯ