ಬೆಂಗಳೂರಿ (Bengaluru) ನಲ್ಲಿ ಪೋಷಕರು (Parents) ಹಾಗೂ ಆರ್ಕಿಡ್ಸ್ ಸ್ಕೂಲ್ (Orchids school) ಮಾತಿನ ಜಟಾಪಟಿ ಮುಂದುವರೆದಿದೆ. ಬಿಟಿಎಂ ಲೇಔಟ್ ಎರಡನೇ ಹಂತದಲ್ಲಿ ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ಇದೆ. ಕ್ಯಾಂಪಸ್ ಶಿಫ್ಟ್ ವಿಚಾರವಾಗಿ ಪೋಷಕರು ಮೊನ್ನೆಯು ಗಲಾಟೆ ಮಾಡಿದ್ದರು.
ನರ್ಸರಿ ಮಕ್ಕಳಿಗೆ ಟೀಚ್ ಮಾಡ್ಬೇಕಿದ್ದ ಟೀಚರ್ಸ್ ಬೇರೆ ಕ್ಯಾಂಪಸ್ ಗೆ ಶಿಫ್ಟ್ ಆಗಿದ್ದಾರೆ. ಶಾಲಾ ಸಿಬ್ಬಂದಿ ನಿನ್ನೆ ಲೈಟ್ ಆಫ್ ಮಾಡಿ ಮಕ್ಕಳನ್ನು ಕ್ಲಾಸ್ ರೂಂ ನಲ್ಲಿ ಮಲಗಿಸಿದ್ದರು. ಮಕ್ಕಳು ತಂದ ಟಿಫನ್ ಬಾಕ್ಸ್ ನ್ನು ಶಾಲಾ ಆಡಳಿತ ಮಂಡಳಿ ಕಿತ್ತಿಟ್ಟುಕೊಂಡಿದ್ದಾರೆ. ನಾವು ಫೀಸ್ ಕಟ್ಟಿದ್ದೀವಿ ನಮ್ಮ ಮಕ್ಕಳಿಗೆ ಯಾಕೆ ಹೀಗೆ ಶಿಕ್ಷಣದಿಂದ ವಂಚಿತರಾಗಿ ಮಾಡ್ತಿದ್ದೀರಾ ಎಂದು ಪೋಷಕರು ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಇಂದು ಕೂಡ ಶಾಲಾ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಪೋಷಕರು ಸೇರಿದ್ದಾರೆ.
ಇದನ್ನು ಓದಿ : – ಹೊಟೇಲ್ ನಿಂದ ಊಟ ತರಿಸಿ ದಲಿತರ ಮನೆಯಲ್ಲಿ ಊಟ ಮಾಡ್ತಾರೆ – ಡಾ.ಜಿ ಪರಮೇಶ್ವರ್..!