ರಾಷ್ಟ್ರ ರಾಜಧಾನಿ ದೆಹಲಿ ( DELHLI ) ಯಲ್ಲಿ ಶೀತಮಾರುತ ಸತತ 5ನೇ ದಿನವೂ ಬೀಸುತ್ತಿದ್ದು, ಉಷ್ಣಾಂಶ ತೀವ್ರವಾಗಿ ಕುಸಿದಿದೆ. ದಟ್ಟ ಮಂಜು ಕವಿದಿದ್ದು, ಚಳಿ ಹೆಚ್ಚಾಗಿದೆ. ಮಂಜು ದಟ್ಟೈಸಿದ ಕಾರಣ ರನ್ವೇಗಳು ಪೈಲಟ್ಗಳಿಗೆ ಸರಿಯಾಗಿ ಕಾಣಿಸುತ್ತಿಲ್ಲ. ಹೀಗಾಗಿ ದೆಹಲಿಯಲ್ಲಿ ವಿವಿಧೆಡೆ ತೆರಳಬೇಕಾದ ಹಾಗೂ ದೆಹಲಿಯಲ್ಲಿ ಇಳಿಯಬೇಕಾದ ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ . ದೆಹಲಿಯಿಂದ ನೇಪಾಳಕ್ಕೆ ತೆರಳಬೇಕಿದ್ದ ವಿಮಾನ, ಜೈಪುರ, ಶಿಮ್ಲಾ, ಚಂಡೀಗಡ, ಕುಲು, ಡೆಹ್ರಾಡೂನ್ ಸೇರಿದಂತೆ ಹಲವು ನಗರಗಳಿಗೆ ತೆರಳಬೇಕಿದ್ದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಹಳಿಗಳು ಮತ್ತು ಸಿಗ್ನಲ್ ಸರಿಯಾಗಿ ಗೋಚರಿಸುತ್ತಿಲ್ಲವಾದ ಕಾರಣ ರೈಲುಗಳ ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗಿದೆ. 267 ರೈಲುಗಳ ಸಂಚಾರ ರದ್ದಾಗಿದ್ದಾರೆ, 170 ರೈಲುಗಳು ನಿಧಾನವಾಗಿ ಸಂಚರಿಸುತ್ತಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ದೆಹಲಿಯ ಸಫ್ದಾರ್ ಜಂಗ್ ಹವಾಮಾನ ವೀಕ್ಷಣಾ ಕೇಂದ್ರದಲ್ಲಿ ಕನಿಷ್ಠ ತಾಪಮಾನವು 3.8 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಲೋಧಿ ರಸ್ತೆ, ಅಯನಗರ್ ಮತ್ತು ರಿಡ್ಜ್ ಹವಾಮಾನ ಕೇಂದ್ರಗಳಲ್ಲಿ ಸರಾಸರಿ 3.2 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ.
ಚಳಿಗಾಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನವರಿ 15ರವರೆಗೆ ಶಾಲೆಗಳಿಗೆ ರಜೆ ಘೋಷಿಸುವಂತೆ ದೆಹಲಿ ಸರ್ಕಾರ ಸೂಚನೆ ನೀಡಿದೆ. ಇದನ್ನೂ ಓದಿ – ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆ – ಇಂದು ಸಿಎಂ ಪೂರ್ವಭಾವಿ ಚರ್ಚೆ
1997 ಮತ್ತು 1998ರಲ್ಲಿ ದೆಹಲಿಯಲ್ಲಿ ಸತತ 7 ದಿನಗಳ ಶೀತಗಾಳಿ ಬೀಸಿತ್ತು. 2003, 2013 ಮತ್ತು 2021ರಲ್ಲಿ 6 ದಿನಗಳ ಶೀತಮಾರುತ ಕಾಣಿಸಿಕೊಂಡಿತ್ತು. 1992 ಮತ್ತು 2008ರಲ್ಲಿ ದಾಖಲೆಯ 12 ದಿನಗಳ ಶೀತಮಾರುತ ಬೀಸಿತ್ತು. ಈ ಬಾರಿ ಶೀತಮಾರುತವು ಸತತ 5ನೇ ದಿನ ಬೀಸುತ್ತಿದ್ದು, ಇದು ಹೊಸ ದಾಖಲೆ ಬರೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ – ಸಿದ್ದರಾಮಯ್ಯ ಕ್ಷೇತ್ರ ಫೈನಲ್ – ಕೋಲಾರದಿಂದ ಅಖಾಡಕ್ಕೆ !