ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (Boris johnson) ವಿರುದ್ಧ ಬಂಡಾಯ ತೀವ್ರಗೊಂಡಿದೆ. ಸರ್ಕಾರದಲ್ಲಿನ ಸಚಿವರು ರಾಜೀನಾಮೆ ನೀಡಿ ಹೊರ ನಡೆಯುತ್ತಿದ್ದಂತೆ, ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸ್ಥಾನಕ್ಕೆ ಕಂಟಕ ಎದುರಾಗಿದೆ.
ಆಡಳಿತಾರೂಢ ಕನ್ಸರ್ವೆಟಿವ್ ಪಾರ್ಟಿಯ ಸಂಸದರಿಂದ ಬೋರಿಸ್ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಪ್ರಧಾನಿ ಹುದ್ದೆ ತೊರೆಯುವಂತೆ ಬ್ರಿಟನ್ ನೆಲ್ಲೆಡೆ ಆಗ್ರಹ ಕೇಳಿ ಬಂದಿದೆ. ಈ ನಡುವೆ ಮುಂದಿನ ಪ್ರಧಾನಿಯ ಆಯ್ಕೆಯ ಬಗೆಗೂ ಚರ್ಚೆ ಜೋರಾಗಿದೆ. ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣಮೂರ್ತಿ (Narayanamurthy) ಅವರ ಅಳಿಯ ರಿಷಿ ಸುನಾಕ್ (Rishi sunak) , ಪ್ರಧಾನಿಯಾಗೋ ಸಾಧ್ಯತೆ ದಟ್ಟವಾಗಿದೆ. ಇದನ್ನೂ ಓದಿ : – ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್
ಕೋವಿಡ್ ಅವಧಿಯಲ್ಲಿ ಕೈಗೊಂಡ ಹಣಕಾಸು ಕಾರ್ಯಕ್ರಮಗಳ ಮೂಲಕ ಉತ್ತಮ ಹೆಸರು ಪಡೆದಿದ್ದ ರಿಷಿ ಸುನಾಕ್ ಇತ್ತೀಚೆಗಷ್ಟೇ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸಚಿವ ಸಂಪುಟದಿಂದ ಹೊರಗುಳಿದಿದ್ದಾರೆ. ಹಲವು ಹಗರಣಗಳು ಹಾಗೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಔತಣಕೂಟ ನಡೆಸಿರುವುದು ಬೋರಿಸ್ ವಿರುದ್ಧ ಮುಳುವಾಗಿ ಪರಿಣಮಿಸಿದೆ. ಇದನ್ನೂ ಓದಿ : – ವೈದ್ಯೆ ಜೊತೆ ಎರಡನೇ ಮದುವೆಯಾದ ಪಂಜಾಬ್ ಸಿಎಂ ಭಗವಂತ್ ಮಾನ್ ಸಿಂಗ್