ಲಡಾಖ್ ನ ಗೋಗ್ರಾ ಪ್ರದೇಶದಿಂದ ತಮ್ಮ ಸೇನೆಗಳನ್ನು ಹಿಂಪಡೆದ ಭಾರತ-ಚೀನಾ

ಭಾರತ (India)ಹಾಗೂ ಚೀನಾ (China) ಸೇನೆಯು ಲಡಾಕ್ (Ladakh) ನ ಗೋಗ್ರಾ ಪ್ರದೇಶದಿಂದ ತಮ್ಮ ಸೈನಿಕ (Soldiers) ರನ್ನು ಹಿಂಪಡೆದಿದೆ. ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಉಭಯ ದೇಶಗಳು ಈ ವಿಷಯ ಸ್ಪಷ್ಟಪಡಿಸಿವೆ.

ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ಸಂಬಂಧ ಮಹತ್ವದ ಬೆಳವಣಿಗೆಯಾಗಿದೆ. ಉಭಯ ದೇಶಗಳು ಲಡಾಖ್ ನ ಗೋಗ್ರಾ ಪೋಸ್ಟ್ ನಿಂದ ಸೇನೆಗಳನ್ನು ಹಿಂಪಡೆದಿವೆ. ಬಿಕ್ಕಟ್ಟನ್ನ ಶಮನ ಮಾಡಲು ಮಿಲಿಟರಿ ಅಧಿಕಾರಿಗಳ ಮಟ್ಟದಲ್ಲಿ ಬರೋಬ್ಬರಿ 15 ಬಾರಿ ಸಭೆಗಳು ನಡೆದಿದ್ದವು. ಇದನ್ನೂ ಓದಿ : –  ಐಟಿ-ಬಿಟಿ ಕಂಪನಿಗಳ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ- ಮೋಹನ್ ದಾಸ್ ಪೈಗೆ ಬಿಜೆಪಿ ಸವಾಲು

ಸದ್ಯ ಸಭೆಯಲ್ಲಿ ಮಾಡಿಕೊಂಡ ಒಪ್ಪಂದಂತೆ ಭಾರತ ಹಾಗೂ ಚೀನಾ ಗೋಗ್ರಾ ಗಡಿಯಿಂದ ಸಂಪೂರ್ಣ ಹಿಂದೆ ಸರಿದಿವೆ. 16ನೇ ಸುತ್ತಿನ ಮಾತುಕತೆ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಎರಡೂ ಸೇನೆಗಳ ನಡುವೆ ಅತ್ಯಂತ ದೊಡ್ಡ ಘರ್ಷಣೆಗೆ ಕಾರಣವಾಗುವ ವಾತಾವರಣ ಗೋಗ್ರಾದಲ್ಲಿ ನಿರ್ಮಾಣವಾಗಿತ್ತು. ಚೀನಿ ಸೇನೆ ಇಲ್ಲಿ ಭಾಗಶಃ ಪರ್ಮನೆಂಟ್ ಟೆಂಟ್ಗಳನ್ನು  ಹಾಕಿಕೊಂಡಿತ್ತು.

ಜೊತೆಗೆ ಆರ್ಟಿಲ್ಲರಿ ಗನ್ಗಳನ್ನು ಸಹ ತಂದಿತ್ತು. ಇಲ್ಲಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಅಂತ ಚೀನಾ ಹಲವು ಬಾರಿ ಹೇಳಿಕೊಂಡೇ ಬಂದಿತ್ತು.. ಕಳೆದ ಮೂರು ತಿಂಗಳಲ್ಲಿ ಭಾರತೀಯ ಸೇನೆ ಎದುರು ಚೀನಾ ಕೊಂಚ ಮಂಕಾಗಿದೆ. ಆ ಹಿನ್ನೆಲೆಯಲ್ಲೇ ಸೇನೆಗಳನ್ನು ವಾಪಸ್ ಪಡೆದಿದೆ.

ಇದನ್ನೂ ಓದಿ : –  ಬ್ರಿಟನ್ ರಾಣಿ ಎಲಿಜಬೆತ್ ಆರೋಗ್ಯದಲ್ಲಿ ಏರುಪೇರು – ಆತಂಕ ಬೇಡ ಎಂದ ಅರಮನೆ ಮೂಲಗಳು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!