ಮಹಿಳಾ ವರ್ಲ್ಡ್ ಕಪ್ ಟೂರ್ನಿ ಯಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಕೊನೆಯ ಎಸೆತದಲ್ಲಿ ಸೋಲನುಭವಿಸಿದ ಭಾರತ ತಂಡಕ್ಕೆ ಕಪ್ ಗೆಲ್ಲುವ ಕನಸು ಭಗ್ನವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ 7 ವಿಕೆಟ್ ನಷ್ಟಕ್ಕೆ 274 ರನ್ಗಳ ಗುರಿಯನ್ನು ನೀಡಿತ್ತು. ತಂಡದ ಬೃಹತ್ ಮೊತ್ತಕ್ಕೆ ಶಫಾಲಿ ವರ್ಮಾ, ಸ್ಮೃತಿ ಮಂಧಾನ ಮತ್ತು ಮಿಥಾಲಿ ರಾಜ್ ಅವರು ಅರ್ಧಶತಕಗಳ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.
275 ರನ್ ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಮಾಡಿತ್ತು. ಪಂದ್ಯವು ಕೊನೆಯ ಓವರ್ನವರೆಗೂ ರೋಚಕತೆಯನ್ನು ಹೊಂದಿತ್ತು. ಇನ್ನೆನ್ನೂ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಲು ಕೊನೆಯ 6 ಎಸೆತಗಳಲ್ಲಿ 7 ರನ್ ಬೇಕಿತ್ತು. ದೀಪ್ತಿ ಶರ್ಮಾ ಎಸೆದ ಕೊನೆಯ ಓವರ್ನ 5ನೇ ಎಸೆತ ನೋ ಬಾಲ್ ಎಸೆದರು.
ಇದರಿಂದಾಗಿ ದಕ್ಷಿಣ ಆಫ್ರಿಕಾ ಫ್ರೀ ಹಿಟ್ನಲ್ಲಿ 6 ರನ್ ಸಿಡಿಸಿ ಗೆಲುವು ಸಾಧಿಸಿತು. ಪ್ಲೇಯರ್ ಆಫ್ ದಿ ಮ್ಯಾಚ್ನ್ನು ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಮಿಗ್ನಾನ್ ಡು ಪ್ರೀಜ್ (52)ಪಡೆದುಕೊಂಡರು. ಈ ಮೂಲಕ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡಿಸ್ ತಂಡ ಸೆಮಿಫೈನಲ್ ನ್ನು ಪ್ರವೇಶಿಸಿದೆ.
ಇದನ್ನಿ ಓದಿ :- IPL 2022 – ಇಂದಿನಿಂದ ಐಪಿಎಲ್ ಹಂಗಾಮ – ಚೆನ್ನೈ ಸೂಪರ್ ಕಿಂಗ್ಸ್ ಗೆ ಕೆಕೆಆರ್ ಸವಾಲು