ಪ್ರಸ್ತುತ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಆಡುತ್ತಿರುವ ಭಾರತ ತಂಡ ಮುಂದಿನ ವರ್ಷ ಏಕದಿನ ಮತ್ತು ಟಿ-20 ಸರಣಿಗಾಗಿ ಇಂಗ್ಲೆಂಡ್ ಗೆ ಮರಳಲಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ 2022ರ ವಾರ್ಷಿಕ ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಇಂಗ್ಲೆಂಡ್ ಜುಲೈನಲ್ಲಿ ಭಾರತ ವಿರುದ್ಧ ಏಕದಿನ ಮತ್ತು ಟಿ-20 ಸರಣಿ ಮೂಲಕ ತವರಿನಲ್ಲಿ ಸರಣಿ ಆಡಲಿದೆ.
ಮುಂದಿನ ವರ್ಷ ಏಪ್ರಿಲ್ ಮತ್ತು ಮೇ ನಡುವೆ ಐಪಿಎಲ್ ನಡೆದ ಬೆನ್ನಲ್ಲೇ ಇಂಗ್ಲೆಂಡ್ ಗೆ ಭಾರತ ತೆರಳಲಿದೆ. ಜುಲೈ 1ರಂದು ಟಿ-20 ಆಡುವ ಮೂಲಕ ಪ್ರವಾಸ ಆರಂಭಿಸಲಿದೆ.
ಜೂನ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡುವ ಮೂಲಕ 3 ಟೆಸ್ಟ್ ಪಂದ್ಯಗಳನ್ನು ಆಡುವ ಮೂಲಕ ಟೆಸ್ಟ್ ಸರಣಿ ಆಡಲಿದೆ.