ಜೂನ್ 10 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ (Rajyasabha election) ಅಡ್ಡ ಮತದಾನದ ಭೀತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ಶಾಸಕರಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಸೂಚನೆಯಂತೆ ವಿಪ್ ಜಾರಿಗೊಳಿಸಲಾಗಿದೆ.
ರಾಜ್ಯಸಭೆಗೆ ಎರಡನೇ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಮನ್ಸೂರ್ ಅಲಿ ಖಾನ್ (Mansoora ali khan)ಅವರನ್ನು ಕಣಕ್ಕಿಳಿಸಿದೆ. ಈ ನಡುವೆ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಬೆಂಬಲ ನೀಡುವಂತೆ ಜೆಡಿಎಸ್ ನಾಯಕರು ಕಾಂಗ್ರೆಸ್ ಮುಖಂಡರ ಬಳಿ ಮನವಿ ಮಾಡಿದ್ದಾರೆ. ಯಾವ ಅಭ್ಯರ್ಥಿಗಳು ಇಂದು ನಾಮಪತ್ರ ವಾಪಾಸ್ ಪಡೆದಿಲ್ಲ.
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಮೊದಲ ಅಭ್ಯರ್ಥಿಯಾಗಿ ಜೈರಾಮ್ ರಮೇಶ್ (Jairam ramesh), 2ನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿಖಾನ್ ಕಣದಲ್ಲಿದ್ದಾರೆ. ಈ ಪೈಕಿ ಮನ್ಸೂರ್ ಅಲಿ ಖಾನ್ ತಮ್ಮ ನಾಮಪತ್ರ ವಾಪಸ್ ಪಡೆಯುತ್ತಾರೆ ಎನ್ನಲಾಗಿತ್ತು. ಮನ್ಸೂರ್ ನಾಮಪತ್ರ ವಾಪಸ್ ತೆಗೆದುಕೊಳ್ಳಲು ಜೆಡಿಎಸ್ (Jds) ಮನವೊಲಿಕೆ ತಂತ್ರ ನಡೆಸಿತ್ತು. ಏಕೆಂದರೆ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವಿಗೆ ಕಾಂಗ್ರೆಸ್ ಬೆಂಬಲ ಯಾಚಿಸಿತ್ತು. ಆದ್ರೆ, ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ಗೆ ಬೆಂಬಲ ನೀಡಲು ನಿರಾಕರಿಸಿತು. ರಾಜ್ಯಸಭೆಗೆ ಜೆಡಿಎಸ್ ಅಭ್ಯರ್ಥಿಯನ್ನು ಕಳಿಸಲು ಪಕ್ಷಕ್ಕೆ 45 ಸದಸ್ಯರ ಬಲ ಇಲ್ಲ.
ಇನ್ನು ಕಾಂಗ್ರೆಸ್ಗೆ ಕೂಡ 2ನೇ ಅಭ್ಯರ್ಥಿಯಾದ ಮನ್ಸೂರ್ ಅಲಿ ಖಾನ್ ಅವರನ್ನು ಗೆಲ್ಲಿಸಲು ಸಾಕಷ್ಟು ಸದಸ್ಯ ಬಲ ಇಲ್ಲ. ಜೈರಾಮ್ ರಮೇಶ್ಗೆ ಮೊದಲ ಪ್ರಾಶಸ್ತ್ಯದ ಮತ ಹಾಕಿದ ಬಳಿಕ ಕಾಂಗ್ರೆಸ್ ಬಳಿ ಕೇವಲ 25 ಮತಗಳು ಉಳಿಯಲಿವೆ. ಮತ ಎಣಿಕೆ ಬಳಿಕವೇ ಈ ಕ್ಲೈಮ್ಯಾಕ್ಸ್ಗೆ ಅಂತ್ಯ ಸಿಗಬಹುದಾಗಿದೆ. ಒಟ್ಟಿನಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿಯ ಗೆಲುವಿಗೆ ಹಾದಿ ಸುಗಮ ಆದಂತಾಗಿದೆ. ಏಕೆಂದರೆ, ಬಿಜೆಪಿ ಶಾಸಕರು ತಮ್ಮ ಪಕ್ಷದ ಇಬ್ಬರು ಅಭ್ಯರ್ಥಿಗೆ ಮತ ಹಾಕಿದ ಬಳಿಕ 32 ಮತಗಳು ಉಳಿಯಲಿವೆ. ಬಿಜೆಪಿಗೆ ಪ್ರತಿಪಕ್ಷಗಳ 13 ಮತಗಳ ಅಗತ್ಯತೆ ಇದೆ. ಒಂದು ವೇಳೆ ಅಡ್ಡ ಮತದಾನ ನಡೆದರೆ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹೆರ್ ಸಿಂಗ್ ಗೆಲುವು ಗ್ಯಾರಂಟಿ. ಇದನ್ನೂ ಓದಿ : – ಪ್ರತಿಪಕ್ಷಗಳ ಮಾತಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ – ಬಸವರಾಜ್ ಹೊರಟ್ಟಿ