ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 54 ರನ್ ಗಳ ಭಾರೀ ಅಂತರದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಣಿಸಿದ್ದು ಮಾತ್ರವಲ್ಲ ಐಪಿಎಲ್ ಇತಿಹಾಸದಲ್ಲೇ ಎರಡು ಅಪರೂಪದ ದಾಖಲೆ ಬರೆದಿದೆ.
ಭಾನುವಾರ ನಡೆದ ಪಂದ್ಯದಲ್ಲಿ 54 ರನ್ ಗಳಿಂದ ಮುಂಬೈ ಇಂಡಿಯನ್ಸ್ ಗೆ ಆಗಿರುವ ಸೋಲು ರೋಹಿತ್ ಶರ್ಮ ನಾಯಕತ್ವದಲ್ಲಿ ಅನುಭವಿಸಿದ ಎರಡನೇ ಅತೀ ದೊಡ್ಡ ಸೋಲಾಗಿದೆ. 2016ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 85 ರನ್ ಗಳಿಂದ ಸೋಲುಂಡಿತ್ತು.
ಮುಂಬೈ ತಂಡವನ್ನು ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ಆರ್ ಸಿಬಿ ಆಲೌಟ್ ಮಾಡಿತು. ಅಲ್ಲದೇ ಒಂದೇ ಋತುವಿನಲ್ಲಿ ಲೀಗ್ ಹಂತದಲ್ಲಿ ಆಡಿದ ಎರಡು ಮುಖಾಮುಖಿಗಳಲ್ಲೂ ಮುಂಬೈ ತಂಡವನ್ನು ಮೊದಲ ಬಾರಿ ಆರ್ ಸಿಬಿ ಸೋಲಿಸಿದ ದಾಖಲೆ ಬರೆಯಿತು.
ಆರ್ ಸಿಬಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಹರ್ಷಲ್ ಪಟೇಲ್ 23 ವಿಕೆಟ್ ಪಡೆದಿದ್ದು ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡದ ಬೌಲರ್ ವೊಬ್ಬನ ಗರಿಷ್ಠ ವಿಕೆಟ್ ಸಾಧನೆ ಮಾಡಿದ್ದಾರೆ.