ತಾಲ್ಲೂಕು ಕೋರ್ಟ್ ನಲ್ಲಿ ವಕೀಲರಾಗಿದ್ದವರು ಸಿದ್ದರಾಮಯ್ಯ (SIDDARAMAIAH )ಎನ್ನುವ ಸಂಸದ ಪ್ರತಾಪ್ ಸಿಂಹ ( PRATHAP SIMHA ) ಮಾತಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ನಾನು ಆರ್ಥಿಕತೆ ಓದಿಲ್ಲ. ನಾನು ಓದಿರುವುದು ಲಾ .ಮೈಸೂರು ಕೋರ್ಟ್ ನಲ್ಲಿ ವಕೀಲನಾಗಿದ್ದೆ. ಹೈಕೋರ್ಟ್ ನಲ್ಲಿ ಪ್ರಾಕ್ಟೀಸ್ ಮಾಡಲಿಲ್ಲ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ತಜ್ಞರಾ ? ಸಂಸದ ಪ್ರತಾಪ್ ಸಿಂಹ ಸಿಎಂ ಬೊಮ್ಮಾಯಿ ಆರ್ಥಿಕ ತಜ್ಞರಾ ? ಎಂದು ಪ್ರಶ್ನಿಸಿದ್ದಾರೆ.
ನಾನು ಹೇಳುವುದು ಸರಿ ತಪ್ಪು ಹೇಳಬೇಕಾದರೆ ಇವರು ಆರ್ಥಿಕ ತಜ್ಙರಾಗಿರಬೇಕಲ್ಲಾ ? ಪಾಪ ಪ್ರತಾಪ್ ಸಿಂಹನಿಗೆ ಗೊತ್ತಾಗಲ್ಲ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ. ಮೈಸೂರು ಬೆಂಗಳೂರು ರಸ್ತೆ ವಿಚಾರವಾಗಿ ಮಾತನಾಡಿದ ಅವರು ಇದು ನಮ್ಮ ಕಾಲದಲ್ಲಿ ಅಪ್ಗ್ರೇಡ್ ಆಗಿದ್ದು. ಅದು ಪ್ರತಾಪಸಿಂಹ ಮಾಡಿದಲ್ಲ. ಇವರು ಕೇವಲ ಮೈಸೂರು ಎಂಪಿ ಮಂಡ್ಯಗೆ ಇವರಿಗೆ ಬರುತ್ತಾ ? ಪ್ರತಾಪಸಿಂಹ ಬರೀ ಸುಳ್ಳೇ ಹೇಳುತ್ತಾರೆ. ಮೈಸೂರಿನಲ್ಲಿ ಆಸ್ಪತ್ರೆ, ಕಾಲೇಜು, ಹಾಸ್ಟೆಲ್ , ಡಿಸಿ ಕಚೇರಿ ಪೊಲೀಸ್ ಕಮಿಷನರ್ ಕಚೇರಿ ಕಟ್ಟಿದ್ದು ಇವನಾ ? ಅಂಬೇಡ್ಕರ್ ಭವನ ಕಟ್ಟಿದ್ದು ಯಾರು ಇವನಾ ? ಎಂದು ಏಕವಚನದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ದ ವಾಗ್ದಾಳಿ ನಡೆಸಿದ್ರು.
ಹಿಂದೂಗಳ ಭಾವನೆಗೆ ಧಕ್ಕೆಯಾಗದಂತೆ ಪಠ್ಯ ಪರಿಷ್ಕರಣೆ ವಿಚಾರ
ಅಂಬೇಡ್ಕರ್ ಹಿಂದೂ ಅಲ್ಲವಾ ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಅವರ ಕೆಲವು ವಾಕ್ಯ ತೆಗೆದಿದ್ದೀರಾ ಸಂವಿಧಾನ ಶಿಲ್ಪಿ ಅನ್ನೋದನ್ನು ತೆಗೆದಿದ್ದೀರಾ. ಕುವೆಂಪು ಬಸವಣ್ಣ ನಾರಾಯಣ ಗುರು ಹಿಂದೂ ಅಲ್ವಾ ? ಬಿಜೆಪಿ ಅವರು ಯಾರನ್ನು ಹಿಂದೂ ಅಂತಾರೆ ಯಾರನ್ನು ಅಲ್ಲ ಅಂತಾರೆ ಅವರಿಗೆ ಗೊತ್ತು. ನಾನು ಹಿಂದೂ ಅಲ್ವಾ ? ಅವರು ಹೇಳಿದವರು ಮಾತ್ರ ಹಿಂದೂನಾ ? ಕುವೆಂಪು, ಅಂಬೇಡ್ಕರ್, ಭಗತ್ ಸಿಂಗ್ , ನಾರಾಯಣ್ ಗುರು ಅವರಿಗೆ ಅವಮಾನ ಮಾಡಿದ್ದಾರೆ. ಕೃತಿ ಚೌರ್ಯ ಮಾಡಿದ್ದಾರೆ. ರೋಹಿತ್ ಚಕ್ರತೀರ್ಥ ಸಮಿತಿಯ ಪರಿಷ್ಕರಣೆ ರಿಜೆಕ್ಟ್ ಮಾಡಿ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿರುವುದನ್ನು ಅನುಷ್ಠಾನ ಮಾಡಿ ಎಂದು ಆಗ್ರಹಿಸಿದ್ದಾರೆ. ಇದನ್ನು ಓದಿ :- ಸಿದ್ದರಾಮಯ್ಯ ಎಲ್ಲದರಲ್ಲೂ ರಾಜಕೀಯ ಮಾಡ್ತಾರೆ – ಸಿಎಂ ಬೊಮ್ಮಾಯಿ
ಸಿಎಂ ಇಬ್ರಾಹಿಂ ವಿರುದ್ದ ವಾಗ್ದಾಳಿ
ಸಿಎಂ ಇಬ್ರಾಹಿಂಗೆ ಮಾನ ಮರ್ಯಾದೆ ಇಲ್ಲ. ಅವನು ಜೆ.ಡಿ.ಎಸ್ ನಲ್ಲಿ ಕ್ಯಾಪ್ಟೀವ್ ಪ್ರೆಸಿಡೆಂಟ್ ಇದ್ದಂತೆ. ಕುಳಿತುಕೋ ಅಂದರೆ ಕೂಳಿತುಕೊಳ್ಳಬೇಕು. ನಿಂತುಕೋ ಅಂದರೆ ನಿಂತುಕೊಳ್ಳಬೇಕು. ಎಂಎಲ್ಸಿ ಮಾಡುತ್ತೇವೆ ಅಂತ ಕರಕೊಂಡು ಹೋದರು ಎಂಎಲ್ಸಿ ಮಾಡಿದ್ದಾರಾ ? ಏನೋ ಒಂದು ಹುದ್ದೆ ಕೊಟ್ಟಿದ್ದಾರೆ ಅಂತ ಬಾಯಿಗೆ ಬಂದಂತೆ ಮಾತನಾಡುತ್ತಾನೆ ಎಂದು ಇಬ್ರಾಹಿಂ ವಿರುದ್ದ ಕಿಡಿಕಾರಿದ್ರು.
ಕುಮಾರಸ್ವಾಮಿ ವಿರುದ್ಧ ಸಿದ್ದು ಗರಂ
ಸಿದ್ದರಾಮಯ್ಯ ಎಂ.ಎಲ್.ಎ ಗಳನ್ನು ಕಳುಹಿಸಿದರು ಅಂದರು. ಈಗ ಈ ರೀತಿ ಹೇಳುತ್ತಿದ್ದಾರೆ ಯಾವುದು ಸತ್ಯ ಯಾವುದು ಸುಳ್ಳು. ಅವರ ರೀತಿ ಸುಳ್ಳು ಹೇಳಲು ನಮಗೆ ಬರುವುದಿಲ್ಲ. ಟಾರ್ಚರ್ ವಿಚಾರ ಅಂದು ಏಕೆ ಹೇಳಲಿಲ್ಲ ? ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ ಆಗ ಟಾರ್ಚರ್ ಬಗ್ಗೆ ಹೇಳಿಲ್ಲ. ಈಗ ಹೇಳಿದರೆ ನಂಬಿಕೊಳ್ಳಬೇಕಾ ? ಕುಮಾರಸ್ವಾಮಿ ಅವರನ್ನೇ ಈ ಬಗ್ಗೆ ಕೇಳಿ ಎಂದು ತಿಳಿಸಿದ್ರು.
ಇದನ್ನು ಓದಿ :- ಸಿದ್ದರಾಮಯ್ಯ ಎಲ್ಲದರಲ್ಲೂ ರಾಜಕೀಯ ಮಾಡ್ತಾರೆ – ಸಿಎಂ ಬೊಮ್ಮಾಯಿ