ಶ್ರೀನಿವಾಸ್ ಗೌಡ ಕಾಂಗ್ರೆಸ್ ಗೆ ಓಟ್ ಹಾಕುವ ನಿರ್ಧಾರ ಮಾಡಿದ್ದಾರೆ ಅಂತ ನಾನು ಮೊದಲೇ ಹೇಳಿದ್ದೆ. ಆ ಮನುಷ್ಯನಿಗೆ ಏನಾದ್ರೂ ಮಾನಮರ್ಯಾದೆ ಇದ್ರೆ ರಾಜೀನಾಮೆ ಕೊಟ್ಟು ರಾಜಕಾರಣ ಮಾಡಲಿ ಎಂದು ಹೆಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಶಾಸಕ ಸ್ಥಾನ ಉಳಿಸಿಕೊಳ್ಳಬೇಕು ಅಂತ ಹೀಗೆ ಮಾಡೋದಾ. ಕೋಲಾರ ಜನರಿಗೆ ಹಾಗೂ ಕಾರ್ಯಕರ್ತರಿಗೆ ಮಾಡಿರುವ ಅವಮಾನ ಇದು. ನಮ್ಮ ಪಕ್ಷದ ಚಿಹ್ನೆಯಿಂದ ಅವರು ಗೆದ್ದಿರುವುದು ನಮ್ಮ ಪಕ್ಷದ ಚಿನ್ಹೆಯಿಂದ ಗೆದ್ದು, ಕಾಂಗ್ರೆಸ್ ಜೊತೆಗೆ ಒಡನಾಟ ಇಟ್ಟುಕೊಂಡು ಯಾವ ನೈತಿಕತೆ ಇಟ್ಟುಕೊಂಡು ಜನರ ಮುಂದೆ ಹೋಗುತ್ತಾರೆ ಎಂದು ಶ್ರೀನಿವಾಸ್ ಗೌಡ ವಿರುದ್ದ ಕಿಡಿಕಾರಿದ್ರು.
ಇನ್ನೊಂದು ಪಕ್ಷದಿಂದ ಗೆದ್ದವರನ್ನ ಹೈಜಾಕ್ ಮಾಡಿ ಇಂತಹ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಕಾಂಗ್ರೆಸ್. 2016 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ 8 ಜನರನ್ನ ಕ್ರಾಸ್ ಓಟ್ ಮಾಡ್ಸಿದ್ರು. ಇವ್ರು ಪ್ರಜಾಪ್ರಭುತ್ವ ಉಳಿಸುತ್ತಾರಾ ? ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ದೇಶದ ಸಂವಿಧಾನದ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಗೌರವ ಇದ್ಯಾ. ಬಿಜೆಪಿಗಿಂತ ಇವ್ರು ಕಡಿಮೆ ಇಲ್ಲ. ಬಿಜೆಪಿ ನಾಯಕರು ಮಾಡುವ ಕೆಲಸವನ್ನ ಇವ್ರು ಮಾಡುತ್ತಿದ್ದಾರೆ. ಬಿಜೆಪಿ ಗೆಲ್ಲಿಸಲು ಹಠಕ್ಕೆ ಬಿದ್ದಿದ್ದಾರೆ. ಶ್ರೀನಿವಾಸ್ ಗೌಡರ ಮತದಿಂದ ನೀವು ಗೆದ್ರೆ ಸಂತೋಷ. ಇದು ಬಿಜೆಪಿ ಗೆಲ್ಲಿಸುವ ಆಟ. ಬಿಜೆಪಿ ಗೆಲ್ಲಿಸಿ ಯಾವ ಮುಖ ಇಡ್ಕೊಂಡು ಹೋಗ್ತಿರಾ. ನಿಮ್ಮ ಬೆಂಬಲ ಇಲ್ಲ ಅಂದ್ರು ಬಿಜೆಪಿ ಕಾಂಗ್ರೆಸ್ ಎದರಿಸುವ ಶಕ್ತಿ ನಮ್ಮ ಕಾರ್ಯಕರ್ತರಿಗಿದೆ. ಇದನ್ನೂ ಓದಿ :- ರಾಜ್ಯಸಭೆ ಚುನಾವಣೆ – ಜೆಡಿಎಸ್ ನಿಂದ ಮೊದಲ ಅಡ್ಡ ಮತದಾನ..!
ನಾವು ಯಾವುದು ಕ್ರಾಸ್ ಓಟ್ ಗೆ ಕೈ ಹಾಕಿಲ್ಲ. ಗುಬ್ಬಿ ಶಾಸಕರು ಜೆಡಿಎಸ್ ಗೆ ಮತ ನೀಡಿದ್ದೇನೆ ಅಂತ ಹೇಳಿದ್ದಾರೆ. ಏನ್ ಮಾಡಿದ್ದಾರೆ ಎಲೆಕ್ಷನ್ ನಲ್ಲಿ ಸಂಜೆ ಅವರ ಹಣೆ ಬರಹ ಗೊತ್ತಾಗುತ್ತದೆ. 3-4 ವರ್ಷದಿಂದ ಹೇಗೆ ನಡೆದುಕೊಂಡಿದ್ದಾರೆ ಎಂದು ಗೊತ್ತಿದೆ. ನನ್ನಿಂದ ಯಾರಿಗೂ ಅನ್ಯಾಯ ಆಗಿಲ್ಲ. ಮಂತ್ರಿ ಮಾಡಿದ್ದೆ ಅನ್ಯಾಯ. ಜನ ಇವರಿಗೆ ಮುಂದೆ ಬುದ್ದಿ ಕಲಿಸುತ್ತಾರೆ. ಹಿಂದೆ ಫಾರುಕ್ ಚುನಾವಣೆ ನಿಂತಾಗ 8 ಕ್ರಾಸ್ ಓಟ್ ಮಾಡಿದ್ರು. ನಂತ್ರ ರಾಮಮೂರ್ತಿ ಬಿಜೆಪಿಗೆ ಹೋದ್ರು. ಇದು ನಿಮ್ಮ ಸಾಧನೆ. ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇಲ್ಲ. ಬಿಜೆಪಿ ಗೆದ್ರೆ ಅದು ನಿಮ್ಮಿಂದ. ನಿಮ್ಮ ನಿಜ ಬಣ್ಣ ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು.
ಇದನ್ನೂ ಓದಿ : – RS ELECTION – ನಿರ್ಮಲಾ ಸೀತಾರಾಮನ್ ಗೆ 46 ಪ್ರಥಮ ಪ್ರಾಶಸ್ತ್ಯದ ಮತ ಚಲಾವಣೆ