ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (Devegowda) ಅವರ ಪತ್ನಿ ಚೆನ್ನಮ್ಮಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು (IT) ನೊಟೀಸ್ ನೀಡಿದ್ದಾರೆ. ಚೆನ್ನಮ್ಮ ಅವರಿಗೆ ಸಂಬಂಧಿಸಿದ ಆಸ್ತಿ ವಿವರದ ಬಗ್ಗೆ ಮಾಹಿತಿ ನೀಡುವಂತೆ ನೋಟೀಸ್ ನಲ್ಲಿ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ವಿಷಯವನ್ನ ದೇವೇಗೌಡರ ಪುತ್ರ ಮಾಜಿ ಸಚಿವ ಹೆಚ್ ಡಿ ರೇವಣ್ಣ (HD Revanna) ದೃಢಪಡಿಸಿದ್ದಾರೆ. ಐಟಿ ಅಧಿಕಾರಿಗಳು ನನ್ನ ತಾಯಿಗೆ ನೋಟಿಸ್ ನೀಡಿದ್ದಾರೆ. ಆಸ್ತಿ ವಿವರದ ಮಾಹಿತಿ ಕೋರಿದ್ದಾರೆ. ಒಬ್ಬ ಮಾಜಿ ಪ್ರಧಾನಿ ಪತ್ನಿಗೆ ನೋಟಿಸ್ ಕೊಟ್ಟಿದ್ದಾರೆ. ಆದ್ರೇ ಇದಕ್ಕೆ ಉತ್ತರ ಕೊಡೋದು ಗೊತ್ತಿದೆ. ನನಗೆ ಕೊಟ್ಟಿದ್ದರೆ ಬೇಜಾರು ಇರಲಿಲ್ಲ ಎಂದು ಕಿಡಿಕಾರಿದ್ದಾರೆ. ನಮಗೂ ಕಾಲ ಬರುತ್ತೆ ಎಂದು ಹೇಳಿದ್ದಾರೆ.
ಇದನ್ನು ಓದಿ :- ಸಿದ್ದರಾಮಯ್ಯ ಬಗ್ಗೆ ಮಾತಾಡುವ ಅಗತ್ಯವಿಲ್ಲ – ಹೆಚ್.ಡಿ ಕುಮಾರಸ್ವಾಮಿ